‘ನಿಮ್ಮ ಮನೆ ನಿಮ್ಮ ನಕ್ಷೆಗೆ ಲೈಸೆನ್ಸ್’ ಪ್ರಕ್ರಿಯೆಗೆ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ಮೈಸೂರು,ಡಿಸೆಂಬರ್,17,2020(..): “ನಿಮ್ಮ ಮನೆ ನಿಮ್ಮ ನಕ್ಷೆಗೆ ಲೈಸೆನ್ಸ್” ಪ್ರಕ್ರಿಯೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿ ಗುರುವಾರ ಚಾಲನೆ ನೀಡಿ ಮಾತನಾಡಿ, ಇನ್ನು ಮುಂದೆ ಅರ್ಜಿ ಸಲ್ಲಿಸಿದ ದಿನದಂದೇ ಮನೆ ನಿರ್ಮಾಣದ ಪ್ರಾರಂಭಿಕ ಲೈಸೆನ್ಸ್ ಪಡೆಯಬಹುದು ಎಂದರು. ಮುಡಾದಿಂದ ನಿವೇಶನದಾರಿಗೆ ಅನುಕೂಲ ಕಲ್ಪಿಸುವ ವಿನೂತನ ಕಾರ್ಯಕ್ರಮವಾಗಿದೆ. ಈ ಮೊದಲು ಅರ್ಜಿ ಸಲ್ಲಿಸಿ ಬಹಳಷ್ಟು ದಿನಗಳ ವರೆಗೆ ಕಾಯಬೇಕಿತ್ತು. ಪದೇ ಪದೇ ಮುಡಾ ಕಚೇರಿಗೆ ಅಲೆಯುವ ಪರಿಸ್ಥಿತಿ ಇತ್ತು. ಆದರೆ, ಇದೀಗ ಅರ್ಜಿ ಸಲ್ಲಿಸಿದ ದಿನದಂದೇ ಲೈಸೆನ್ಸ್ ಸಿಗಲಿದೆ ಎಂದು ಹೇಳಿದರು. ಈ ಸಂದರ್ಭ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಶಾಸಕ ಎಲ್.ನಾಗೇಂದ್ರ ಸೇರಿದಂತೆ ಮತ್ತಿತರ ಇದ್ದರು. : -------.. -