ಬಿಜೆಪಿಗೆ ಉದ್ಯೋಗ ಸೃಷ್ಟಿಸಲು ಬಂಡವಾಳ ತರುವ ಯೋಗ್ಯತೆ ಇಲ್ಲ : ರಾಜ್ಯ ಕಾಂಗ್ರೆಸ್ ಟ್ವೀಟ್ ಬೆಂಗಳೂರು,ಡಿಸೆಂಬರ್,17,2020(..) :ರಾಜ್ಯದಲ್ಲಿ ಬಂಡವಾಳ ಹೂಡಿರುವ ಕಂಪನಿಗಳ ಬಿಕ್ಕಟ್ಟು ಬಗೆಹರಿಸಲು ನೀವು ಅಶಕ್ತರಾಗಿದ್ದೀರಿ. ನಿಮಗೆ ಉದ್ಯೋಗ ಸೃಷ್ಟಿಸಲು ಬಂಡವಾಳ ತರುವ ಯೋಗ್ಯತೆಯಂತೂ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ಟ್ವಿಟರ್ ನಲ್ಲಿ ವಾಗ್ದಾಳಿ ನಡೆಸಿದೆ. ಇರುವ ಬಂಡವಾಳ ಹೂಡಿಕೆದಾರರನ್ನು ಉಳಿಸಿಕೊಳ್ಳುವ ಯೋಗ್ಯತೆಯೂ ಇಲ್ಲವಾಗಿದೆ. ಗೋ ರಕ್ಷಣೆಯೇ ಯುವಕರ ಉದ್ಯೋಗವನ್ನಾಗಿ ಮಾಡಲು ಹೊರಟಿದ್ದೀರಾ? ಎಂದು ಟ್ವೀಟ್ ಮೂಲಕ ಬಿಜೆಪಿಯನ್ನು ಟೀಕಿಸಿದೆ. ಒಂದೇ ತಿಂಗಳ ಅವಧಿಯಲ್ಲಿ ಎರೆಡನೇ ಭಾರಿ ಅಡುಗೆ ಇಂಧನದ ಬೆಲೆ 50 ಏರಿಸಲಾಗಿದೆ. ಮತ್ತೊಂದೆಡೆ ಇಂಧನ ತೈಲಗಳ ಬೆಲೆ ನಿರಂತರ ಏರಿಕೆಯಾಗುತ್ತಿದೆ.ಸರ್ಕಾರ ದೇಶದ ಜನರಿಗೆ “ಪ್ಯಾಕೇಜ್” ಮಂಕುಬೂದಿ ಎರಚುತ್ತಾ ಜನರ ಪಾಕೆಟ್ ದೋಚುತ್ತಿದೆ. ಜನರ ಬದುಕಿನ ಸಮಾಧಿಯ ಮೇಲೆ ಸಾಮ್ರಾಜ್ಯ ಸ್ಥಾಪಿಸಲು ಹೊರಟಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದೆ. : -------- -