ಮೈಸೂರಿನಲ್ಲಿ ಗುಂಪು ಮನೆಗಳ ನಿರ್ಮಾಣಕ್ಕೆ ಚಿಂತನೆ: ಸಚಿವರಿಂದ ನಿರ್ಮಾಣ ಸ್ಥಳ ಪರಿಶೀಲನೆ.. ಮೈಸೂರು,ಡಿಸೆಂಬರ್,16,2020(..): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದಲ್ಲಿ ಗುಂಪು ಮನೆಗಳ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದ್ದು ಈ ಹಿನ್ನೆಲೆ ನಿರ್ಮಾಣ ಸ್ಥಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಹಾಗೂ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.ಬಳಿಕ ಮಾತನಾಡಿದ ಸಚಿವರು, ಮೈಸೂರಿನ ಲಲಿತಾದ್ರಿಪುರಂನಲ್ಲಿ ಗುಂಪು ಮನೆಗಳ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದು, ಸುಮಾರು 22 ಎಕರೆಯಲ್ಲಿ 2500 ಮನೆಗಳು ನಿರ್ಮಾಣ ಮಾಡುವ ನಿರೀಕ್ಷೆ ಇದೆ. 1 ಮತ್ತು 2 ರೂಮ್ ಇರುವ ಮನೆಗಳ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದೇವೆ. ಈ ಪ್ರಯೋಗ ಬೆಂಗಳೂರಿನಲ್ಲಿ ಯಶಸ್ವಿಯಾಗಿದೆ ಎಂದರು. ಎಲ್ಲ ತರಹದ ವ್ಯವಸ್ಥೆ ಕೂಡ ಕಲ್ಪಿಸುತ್ತೇವೆ ಹಾಗೂ ಸ್ಪರ್ಧಾತ್ಮಕ ದರದಲಿ ನೀಡುವ ಚಿಂತನೆ. ಈ ಯೋಜನೆಯನ್ನು ಮೈಸೂರಿನ ಜನ ಸ್ವೀಕಾರ ಮಾಡುತ್ತಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು. : 2500--22 ----..