ಹುತಾತ್ಮ ವೀರಯೋಧರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಗೌರವ ಬೆಂಗಳೂರು,ಡಿಸೆಂಬರ್,16,2020(..): ದೇಶ ಕಾಯುವ ಯೋಧರನ್ನು ಗೌರವಿಸುವುದು, ಅವರ ಮತ್ತು ಅವರ ಕುಟುಂಬದ ಸುಖ-ದುಃಖಗಳಲ್ಲಿ ಭಾಗಿಯಾಗುವುದು ನಮ್ಮೆಲ್ಲರ ಕರ್ತವ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ವಿಜಯ್ ದಿವಸ್ ಅಂಗವಾಗಿ ಇಂದು ನಗರದ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಂಡು, ಹುತಾತ್ಮ ವೀರಯೋಧರಿಗೆ ಗೌರವ ಸಲ್ಲಿಸಲಾಯಿತು ಎಂದು ತಿಳಿಸಿದರು. : ..---