ಪರಿಷತ್ ನಲ್ಲಿ ಹೈಡ್ರಾಮ : ಸಭಾಪತಿ ಪೀಠವನ್ನ ಉಪಸಭಾಪತಿ ಆಕ್ರಮಿಸಿಕೊಂಡಿದ್ದರು ಎಂದು ಆರೋಪಿಸಿದ ಎಸ್.ಆರ್ ಪಾಟೀಲ್ … ಬೆಂಗಳೂರು,ಡಿಸೆಂಬರ್,15,2020(..):ವಿಧಾಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಗದ್ದಲ ಗಲಾಟೆ ನಡೆದು ವಿಧಾನ ಪರಿಷತ್ ಕಲಾಪವನ್ನ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಅನಿರ್ಧಿಷ್ಟಾವಧಿಗೆ ಮುಂದೂಡಿದ್ದಾರೆ. ಅನಿರ್ಧಿಷ್ಟಾವಧಿಗೆ ಕಲಾಪ ಮುಂದೂಡಿಕೆಯಾದರೂ ಸಹ ಕಾಂಗ್ರೆಸ್ –ಬಿಜೆಪಿ ಸದಸ್ಯರ ನಡುವೆ ಗದ್ದಲ, ವಾಕ್ಸಮರ ಮುಂದುವರೆಯಿತು. ಈ ಬಗ್ಗೆ ಮಾತನಾಡಿದ ಎಸ್.ಆರ್ ಪಾಟೀಲ್ , ಸಭಾಪತಿ ಪೀಠವನ್ನ ಉಪಸಭಾಪತಿ ಆಕ್ರಮಿಸಿಕೊಂಡಿದ್ದರು ಎಂದು ಆರೋಪ ಮಾಡಿದ್ದಾರೆ. ಇನ್ನು ಹಾಗೆಯೇ ಬಿಜೆಪಿ ಸದಸ್ಯರ ನಡೆ ಖಂಡಿಸಿದ ಕಾಂಗ್ರೆಸ್ ಎಂಎಲ್ ಸಿ ಪ್ರಕಾಶ್ ರಾಥೊಡ್, ಸಭಾಪತಿ ಬರದಂತೆ ಬಿಜೆಪಿ ಸದಸ್ಯರು ತಡೆದಿದ್ದರು. ಹೀಗಾಗಿ ಗದ್ದಲ ಉಂಟಾಗಿ ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಬಿಜೆಪಿಯವರ ಈ ನಡೆ ಖಂಡನೀಯ ಎಂದು ಕಿಡಿಕಾರಿದರು. : –- : - - - – - ’-