ಸಾರಿಗೆ ನೌಕರರ ಮುಷ್ಕರ: 4 ನಿಗಮಗಳಿಗೆ ಆದ ನಷ್ಟ ಎಷ್ಟು ಗೊತ್ತೆ…? ಬೆಂಗಳೂರು, ಡಿಸೆಂಬರ್,15,2020(..)ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಾಲ್ಕು ದಿನಗಳ ಕಾಲ ನಡೆಸಿದ ಮುಷ್ಕರದಿಂದ ಸಾರಿಗೆಯ ನಾಲ್ಕು ನಿಗಮಗಳಿಗೆ 58 ಕೋಟಿ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ನಾಲ್ಕು ನಿಗಮಗಳಿಂದ ಒಟ್ಟು 1.30 ಲಕ್ಷ ನೌಕರರಿದ್ದಾರೆ. ರಾಜ್ಯದಲ್ಲಿ 6 ಸಾವಿರ ಕೆಎಸ್ ಆರ್ ಟಿಸಿ ಬಸ್ ಗಳಿದ್ದು ದಿನಕ್ಕೆ 7 ಕೋಟಿ ಕಲೆಕ್ಷನ್ ಆಗುತ್ತಿತ್ತು. ಇನ್ನು ನೌಕರರ ಮುಷ್ಕರದಿಂದಾಗಿ ಕೆಎಸ್ ಆರ್ ಟಿಸಿಗೆ 20 ಕೋಟಿಯಷ್ಟು ನಷ್ಟ ಉಂಟಾಗಿದೆ. 4,900 ರಿಂದ 5 ಸಾವಿರ ಬಿಎಂಟಿಸಿ ಬಸ್ ಗಳು ಬೆಂಗಳೂರಿನಲ್ಲಿ ಸಂಚರಿಸುತ್ತವೆ. ಈ ಮಧ್ಯೆ ಬಿಎಂಟಿಸಿಗೆ ದಿನಕ್ಕೆ 2 ಕೋಟಿ 10 ಲಕ್ಷ ಕಲೆಕ್ಷನ್ ಆಗುತ್ತಿತ್ತು. ಇನ್ನು ನೌಕರರ ನಾಲ್ಕು ದಿನಗಳ ಮುಷ್ಕರದಿಂದ ಬಿಎಂಟಿಸಿಗೆ ಸುಮಾರು 7 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನು ವಿಭಾಗಕ್ಕೆ ದಿನಕ್ಕೆ 4 ಕೋಟಿ ಕಲೆಕ್ಷನ್ ಆಗುತ್ತಿತ್ತು. ಆದರೆ ಮುಷ್ಕರದಿಂದ ಗೆ 12 ಕೋಟಿ ನಷ್ಟ ಉಂಟಾಗಿದೆ ಎನ್ನಲಾಗಿದೆ. ಹಾಗೆಯೇ ಸಾರಿಗೆ ನೌಕರರ ಮುಷ್ಕರದಿಂದಾಗಿ ಗೆ 14 ಕೋಟಿ ನಷ್ಟ ಉಂಟಾಗಿದೆ ಎಂದು ಹೇಳಲಾಗುತ್ತಿದೆ. … . : 4 , . 15, 2020 (..): .58 - . 1.30 . , . 7 . . 20 . 5,000 . 2.10 . . 7 , ., .4 . 12 . .14 .: / / / : - - 4 – .