ಸಾಹಿತಿ, ಸಮಾಜ ಸೇವಕಿ ಪಂಕಜ ಅವರ ನಿಧನಕ್ಕೆ ಡಿಸಿಎಂ ಅಶ್ವತ್ ನಾರಾಯಣ್ ಕಂಬನಿ ಬೆಂಗಳೂರು, ಡಿಸೆಂಬರ್,14,2020(..):ಹಿರಿಯ ಸಾಹಿತಿ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಅನನ್ಯ ಸೇವೆ ಮಾಡಿದ್ದ ಎ.ಪಂಕಜಾ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕಂಬನಿ ಮಿಡಿದ್ದಾರೆ. ಕನ್ನಡ ಕಾದಂಬರಿ ಪ್ರಕಾರದಲ್ಲಿ ಪಂಕಜಾ ಅವರದ್ದು ಬಹುದೊಡ್ಡ ಹೆಸರು. ಸುಮಾರು 50ಕ್ಕೂ ಕಾದಂಬರಿಗಳನ್ನು ರಚಿಸಿ, ಅವುಗಳಲ್ಲಿ ಸ್ತ್ರೀಪರ ಸಂವೇದನೆ, ತಲ್ಲಣ ಹಾಗೂ ಅವರ ಸಾಮಾಜಿಕ ಸ್ಥಿತಿಗತಿಗಳನ್ನು ಚಿತ್ರಿಸಿದ್ದಾರೆ. ಜತೆಗೆ; ಶಿಕ್ಷಕಿಯಾಗಿ, ಮಹಿಳಾ ಸಹಕಾರಿ ಬ್ಯಾಂಕ್ ಸ್ಥಾಪಕಿಯಾಗಿ ಅವರು ಸಲ್ಲಿಸಿರುವ ಸೇವೆ ಸದಾ ಸ್ಮರಣೀಯ. ಪಂಕಜಾ ಅವರ ನಿಧನ ಬಹುದೊಡ್ಡ ನಷ್ಟ. ಅವರಿಗೆ ಭಗವಂತ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಈ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಪ್ರಾರ್ಥಿಸಿದ್ದಾರೆ. …. , , 20-4-1932During & , ( ) , & , 50.2 & . & , , . . : - - -.-