ಬೀದರ್ ನಲ್ಲಿ ಬಸ್ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ… ಬೀದರ್ ಡಿಸೆಂಬರ್,14,2020(..):ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು ಈ ಮಧ್ಯೆ ಬೀದರ್ ನಲ್ಲಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಈಶಾನ್ಯ ಸಾರಿಗೆ ಸಂಸ್ಥೆ ಕಲಬುರಗಿ ವಿಭಾಗದ ಬಸ್​ಗಳಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ನಗರದ ಬರಿದ್​ ಶಾಹಿ ಗಾರ್ಡನ್ ಬಳಿ ಕಲಬುರಗಿ ಡಿಪೋದ ಬಸ್​​ನಲ್ಲಿ 25ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ವೇಳೆ ಕಲ್ಲು ತೂರಾಟ ನಡೆಸಿದ್ದು, ಬಸ್​ನ ಹಿಂಬಾಗದ ಗ್ಲಾಸ್ ಪುಡಿ ಪುಡಿಯಾಗಿವೆ. ಇನ್ನು ಸ್ಥಳಕ್ಕೆ ನ್ಯೂಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎನ್ನಲಾಗಿದೆ. ಸಾರಿಗೆ ನೌಕರರ ಮುಷ್ಕರ ಇನ್ನು ಮುಂದುವರೆದಿದ್ದು ಬಸ್ ಸಂಚಾರವಿಲ್ಲದೇ ಪ್ರರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. : – – - -