ಮೈಸೂರಿನಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಬಸ್ ಸಂಚಾರ ಆರಂಭ….. ಮೈಸೂರು,ಡಿಸೆಂಬರ್,14,2020(..):ಸಾರಿಗೆ ನೌಕರರ ಮುಷ್ಕರದಿಂದ ಕಳೆದ ಎರಡು ದಿನಗಳಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಂದ್ ಆಗಿದ್ದ ಬಸ್ ಸಂಚಾರ ಇದೀಗ ಆರಂಭವಾಗಿದೆ. ಮೈಸೂರಿನಿಂದ ಕ್ಯಾಲಿಕ್ಯಾಟ್ ಹಾಗೂ ಬೆಂಗಳೂರು ಬಸ್‌ ಸಂಚರಿಸುತ್ತಿವೆ. ಸಿಬ್ಬಂದಿಗಳು ನಿಧಾನವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಈ ಹಿನ್ನೆಲೆ ಮೈಸೂರಿನಿಂದ ಜಿಲ್ಲಾ ಕೇಂದ್ರಗಳಿಗೂ ಬಸ್ ಸಂಚಾರ ಆರಂಭವಾಗಿದೆ. ಪೊಲೀಸ್ ಬಿಗಿ ಭದ್ರತೆಯಲ್ಲಿ ಎಸ್ಕಾರ್ಟ್ ಜೊತೆ ಬಸ್ ಸಂಚಾರ ಆರಂಭವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಬಸ್ ಸಂಚಾರ ಆರಂಭಗೊಳ್ಳುತ್ತಿದ್ದಂತೆ ಪ್ರಯಾಣಿಕರು ಬಸ್ ನಿಲ್ದಾಣದತ್ತ ಆಗಮಿಸುತ್ತಿದ್ದು ಬೆಂಗಳೂರಿನ ಕಡೆಗೆ ಹೆಚ್ಚಿನ ಪ್ರಯಾಣಿಕರು ಸಂಚಸಿರುತ್ತಿದ್ದಾರೆ. ಸಾರಿಗೆ ನೌಕರರ ಮುಷ್ಕರ ಅಂತ್ಯವಾಗುವ ಬಗ್ಗೆ ಮಾಹಿತಿ ಇದೆ ಎಂದು ಈಗಾಗಲೇ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. …. , . 14, 2020 (..): . . , .: / / : – – - -