ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ ನಿಧನ : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ನಾಗಾಭರಣ ಸಂತಾಪ ಬೆಂಗಳೂರು,ಡಿಸೆಂಬರ್,13,2020(..) :ಹೆಸರಾಂತ ವಿದ್ವಾಂಸ, ಪ್ರವಚನ ಬ್ರಹ್ಮ, ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯರ ನಿಧನದಿಂದ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಸಂತಾಪ ವ್ಯಕ್ತಪಡಿಸಿದ್ದಾರೆ. ಅಖಂಡ ಪ್ರವಚನದ ಮೂಲಕ ವಿದೇಶಗಳಲ್ಲೂ ಹೆಸರುಮಾಡಿದ್ದ ಬನ್ನಂಜೆ ಅವರು ತಮ್ಮ ಪ್ರವಚನಗಳ ಮೂಲಕ ತತ್ವ ಪ್ರಚಾರ ಕೈಗೊಂಡಿದ್ದರು. ಮಾಧ್ವ ತತ್ವದಲ್ಲಿ ಅಮೋಘ ಪಾ೦ಡಿತ್ಯ ಸಾಧಿಸಿರುವ ಇವರು ಕನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ ಎಂದು ಸ್ಮರಿಸಿದರು. ಇಂತಹ ಒಂದು ಎತ್ತರದ ಪ್ರತಿಭೆಯನ್ನು ಈನಾಡು ಕಳೆದುಕೊಂಡಿದೆ ಎಂದಿರುವ ಅಧ್ಯಕ್ಷರು, ತುಂಬು ಜೀವನ ನಡೆಸಿದ ಅವರ ಅಗಲಿಕೆಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ತಿಳಿಸಿದ್ದಾರೆ. :-- ----- . -