ಸದನದಲ್ಲಿ ಕೂತು ಮೊಬೈಲ್’ನಲ್ಲಿ “ರೋಮಾಂಚನದ” ಚಿತ್ರ ವೀಕ್ಷಿಸಿದಂತಲ್ಲ!! : ರಾಜ್ಯ ಕಾಂಗ್ರೆಸ್ ಟ್ವೀಟ್ ಬೆಂಗಳೂರು,ಡಿಸೆಂಬರ್,13,2020(..): ಸಾರಿಗೆ ನೌಕರರ ಪ್ರತಿಭಟನೆ ನಿರ್ವಹಿಸುವುದರಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸೋತಿದೆ. ಸಚಿವ ಲಕ್ಷ್ಮಣ್ ಸವದಿ ಅವರೇ ಬಿಕ್ಕಟ್ಟುಗಳನ್ನ ನಿರ್ವಹಿಸುವುದೆಂದರೆ ಸದನದಲ್ಲಿ ಕೂತು ಮೊಬೈಲ್’ನಲ್ಲಿ “ರೋಮಾಂಚನದ” ಚಿತ್ರ ವೀಕ್ಷಿಸಿದಂತಲ್ಲ!! ಎಂದು ಟ್ವಿಟರ್ ನಲ್ಲಿ ಕಿಡಿಕಾರಿದೆ.ಪ್ರಯಾಣಿಕರ ಪರದಾಟ, ಅನಾನುಭವಿ ಖಾಸಗಿ ಚಾಲಕರ ಪೀಕಲಾಟ. ಸರ್ಕಾರದ ಮೊಂಡು ಹಠ, ಖಾಸಗಿ ಬಸ್ ಮಾಲೀಕರ ನಿರಾಕರಣೆ ಇದೆಲ್ಲವನ್ನು ನಿರ್ವಹಿಸುವಲ್ಲಿ ಸಚಿವ ಲಕ್ಷ್ಮಣ್ ಸವದಿ ಸೋತಿದ್ದಾರೆ ಎಂದು ಟ್ವೀಟ್ ಮಾಡಿದೆ. : ------ -