ತಾಕತ್ತಿದ್ದರೆ ಇವತ್ತೆ ದಾಖಲೆ ಬಿಡುಗಡೆ ಮಾಡಿ : ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸವಾಲು ಬೆಂಗಳೂರು,ಡಿಸೆಂಬರ್,13,2020(..): ತಾಕತ್ತಿದ್ದರೆ ಇವತ್ತೆ ದಾಖಲೆ ಬಿಡುಗಡೆ ಮಾಡಿ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ಸಚಿವ ಲಕ್ಷ್ಮಣ್ ಸವದಿಗೆ ಸವಾಲು ಹಾಕಿದ್ದಾರೆ.ಸಾರಿಗೆ ನೌಕರರ ಪ್ರತಿಭಟನೆಯಲ್ಲಿ ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಭಾಗಿ ಹಿನ್ನೆಲೆ ಕುರಿತು ಸಚಿವ ಲಕ್ಷ್ಮಣ್ ಸವದಿ ಕೋಡಿಹಳ್ಳಿ ಹಿಂದೆ ಕಾಣದ ಕೈ ಇದೆ. ಇದಕ್ಕೆ ಪೂರಕ ದಾಖಲೆಗೆ ಕಾಯುತ್ತಿರುವುದಾಗಿ ಹೇಳಿದ್ದರು. ಈ ಹೇಳಿಕೆಗೆ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದು, ತಾಕತ್ತಿದ್ದರೆ ಇವತ್ತೆ ದಾಖಲೆ ಬಿಡುಗಡೆ ಮಾಡಿ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ನೌಕರರನ್ನು ಹತ್ತಿಕಲು ಈ ರೀತಿ ಆರೋಪ ಮಾಡಿದ್ದು, ಸಿಬ್ಬಂದಿ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಹೇಳಿದ್ದಾರೆ. : -------