ಇಂದು ಸಂಜೆವರೆಗೆ ಕಾಯುತ್ತೇವೆ: ನಾಳೆ ಅಗತ್ಯ ಕ್ರಮ- ಬಿಎಂಟಿಸಿ ಎಂಡಿ ಶಿಖಾ ಹೇಳಿಕೆ… ಬೆಂಗಳೂರು,ಡಿಸೆಂಬರ್,12,2020(..):ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ಹೂಡಿರುವ ಹಿನ್ನೆಲೆ ಇಂದು ಸಂಜೆವರೆಗೆ ಕಾಯುತ್ತೇವೆ. ಕರ್ತವ್ಯಕ್ಕೆ ಹಾಜರಾಗದಿದ್ದರೇ ನಾಳೆ ಅಗತ್ಯಕ್ರಮ ಕೈಗೊಳ್ಳುತ್ತೇವೆ ಎಂದು ಬಿಎಂಟಿಸಿ ಎಂಡಿ ಶಿಖಾ ಅವರು ತಿಳಿಸಿದ್ದಾರೆ. ಸಾರಿಗೆ ನೌಕರರ ಮುಷ್ಕರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಎಂಟಿಸಿ ಎಂಡಿ ಶಿಖಾ, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಯಾವತ್ತೂ ಕೂಡ ನಾವು ಚರ್ಚೆಗೆ ಸಿದ್ಧರಿದ್ದೇವೆ. ಸಾರಿಗೆ ನೌಕರರ ಸಂಘದವರೇ ಚರ್ಚೆಗೆ ಬರಲಿ ಎಂದು ಹೇಳಿದರು. ಹಾಗೆಯೇ ಸಾರ್ವಜನಿಕರಿಗೆ ತೊಂದರೇ ನೀಡದೇ ಕೆಲಸಕ್ಕೆ ಹಾಜರಾಗಿ ಎಂದು ಮನವಿ ಮಾಡಿದ ಶಿಖಾ ಅವರು, ಇಂದು ಸಂಜೆವರೆಗೆ ಕಾಯುತ್ತೇವೆ. ಕರ್ತವ್ಯಕ್ಕೆ ಹಾಜರಾಗದಿದ್ದರೇ ನಾಳೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. : - - -- - -