ಡಿ.15 ರಂದು ವಿಧಾನ ಪರಿಷತ್ ಕಲಾಪ ಕರೆಯುವಂತೆ ವಿಧಾನಪರಿಷತ್ ಕಾರ್ಯದರ್ಶಿಗೆ ಪತ್ರ… ಬೆಂಗಳೂರು,ಡಿಸೆಂಬರ್,11,2020(..):ವಿಧಾನಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಚರ್ಚೆ ಹಿನ್ನೆಲೆ ವಿಧಾನಪರಿಷತ್ ಕಲಾಪವನ್ನ ಮುಂದುವರೆಸುವಂತೆ ಸೂಚನೆ ನೀಡಲಾಗಿದೆ. ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ವಿಧಾನಪರಿಷತ್ ಕಾರ್ಯದರ್ಶಿಗೆ ಪತ್ರ ಬರೆದು ಕಲಾಪ ನಡೆಸಲು ಸೂಚನೆ ನೀಡಿದ್ದಾರೆ. ಡಿಸೆಂಬರ್ 15 ರಂದು ಮಂಗಳವಾರ ಬೆಳಿಗ್ಗೆ 11ಕ್ಕೆ ವಿಧಾನಪರಿಷತ್ ಕಲಾಪ ಕರೆಯಬೇಕು ಎಂದು ಪತ್ರದಲ್ಲಿ ಸೂಚನೆ ನೀಡಲಾಗಿದೆ. ಡಿಸೆಂಬರ್ 15ರವರೆಗೆ ನಡೆಯಬೇಕಿದ್ದ ವಿಧಾನಪರಿಷತ್ ಕಲಾಪವನ್ನ ನಾಲ್ಕೇ ದಿನಕ್ಕೆ ಮೊಟಕುಗೊಳಿಸಲಾಗಿತ್ತು. ಆದರೆ ವಿಧಾನಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ನೋಟೀಸ್ ನೀಡಿ 14 ದಿನಗಳು ಪೂರ್ಣವಾಗದ ಹಿನ್ನೆಲೆ ನಿರ್ಣಯ ಮಂಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಡಿಸೆಂಬರ್ 15 ರಂದು ವಿಧಾನಪರಿಷತ್ ಕಲಾಪ ಕರೆಯುವಂತೆ ಪತ್ರ ಬರೆಯಲಾಗಿದ್ದು ನಿಯಾಮವಳಿಗಳಂತೆ ಅವಿಶ್ವಾಸ ನಿರ್ಣಯ ಕುರಿತು ಚರ್ಚಿಸಲು ಅನುವು ಮಾಡಿಕೊಡಬೇಕೆಂದು ನಿರ್ದೇಶನ ನೀಡಲಾಗಿದೆ. : – – – 15 -