ನೌಕರರು ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ : ಚರ್ಚೆಗೆ ಆಹ್ವಾನಿಸಿ ಮನವಿ ಮಾಡಿದ ಡಿಸಿಎಂ ಲಕ್ಷ್ಮಣ್ ಸವದಿ ಬೆಂಗಳೂರು,ಡಿಸೆಂಬರ್,11,2020(..): ಸಾರಿಗೆ ನೌಕರರು ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ. ಇಂದು ರಾತ್ರಿ ಎಷ್ಟು ಹೊತ್ತಾದರೂ, ನಿಮಗೆ ಕಾಯುತ್ತೇನೆ. ಯಾವಾಗ ಬೇಕಾದರೂ ಮಾತುಕತೆಗೆ ಬನ್ನಿ. ನನಗೆ ಯಾವುದೇ ತರಹದ ಅಹಂ ಇಲ್ಲ ಎಂದು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ. ಚಾಲಕರು, ನಿರ್ವಹಕರು ಕರ್ತವ್ಯಕ್ಕೆ ಹಾಜರಾಗಿ. ಸಂಘಟನೆಯ ಮುಖಂಡರ ಜೊತೆಗೆ ಚರ್ಚಿಸಿ ಸಮಸ್ಯೆ ಬಗೆಹರಿಸುತ್ತೇನೆ. ಒಬ್ಬೊಬ್ಬರ ಜೊತೆಗೂ ಮಾತನಾಡುವುದಕ್ಕೆ ಆಗುವುದಿಲ್ಲ. ಇಂದು ಸಂಜೆ ಇನ್ನೊಂದು ಸಭೆ ಕರೆದು ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ. : ’---------