ಗ್ರಾ.ಪಂ ಚುನಾವಣೆ: ಈ ಬಾರಿ ವೋಟಿಂಗ್ ಮಾರ್ಕ್ ತೋರುಬೆರಳಿಗಲ್ಲ: ಹೆಬ್ಬೆರೆಳಿಗೆ… ಮೈಸೂರು,ಡಿಸೆಂಬರ್,11,2020(..):ಗ್ರಾಮ ಪಂಚಾಯಿತಿ ಚುನಾವಣಾ ಅಖಾಡ ರಂಗೇರಿದ್ದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ. ಡಿಸೆಂಬರ್ 22 ರಂದು ಮೊದಲ ಹಂತ ಮತ್ತು ಡಿಸೆಂಬರ್ 27 ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು ಈ ಬಾರಿ ವೋಟಿಂಗ್ ಮಾರ್ಕ್ ಹೆಬ್ಬೆರೆಳಿಗೆ ಹಾಕಲಾಗುತ್ತದೆ. ಹೌದು ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯಲ್ಲಿ ಈ ಬಾರಿ ಮತದಾನದ ಅಳಿಸಲಾಗದ ಶಾಹಿಯನ್ನ ಎಡ ತೋರು ಬೆರಳಿನ ಬದಲಿಗೆ ಎಡಹೆಬ್ಬೆರಳಿಗೆ ಹಾಕಲು ಚುನಾವಣಾ ಆಯೋಗ ನಿರ್ಧಾರ ಮಾಡಿದೆ. 1993 ರ ನಿಮಯ 52 ರಂತೆ ಮತದಾರನ ಎಡ ತೋರು ಬೆರಳಿಗೆ ಅಥವಾ ಚುನಾವಣಾ ಆಯೋಗ ನಿರ್ಧಿಷ್ಟಪಡಿಸಿದ ಬೆರಳಿಗೆ ಮಾತ್ರವೇ ಗುರುತು ಮಾಡುಬೇಕಾದ ಹಿನ್ನೆಲೆ, ಇತ್ತೀಚೆಗೆ ಕೆಲವು ವಿಧಾನಸಭಾ ಉಪಚುನಾವಣೆಗಳು, ಕೆಲ ಸಹಕಾರ ಸಂಘಗಳ ಚುನಾವಣೆ ನಡೆದಿರುವ ಹಿನ್ನೆಲೆ, ಈಗಾಗಲೇ ಅಳಿಸಲಾಗದ ಶಾಹಿಯನ್ನು ತೋರು ಬೆರಳಿಗೆ ಹಾಕಲಾಗಿರದೆ. ಈ ಕಾರಣಕ್ಕೆ ಚುನಾವಣಾ ಆಯೋಗದ ಈ ನಿರ್ಧಾರ ಕೈಗೊಂಡಿದೆ. ಹೀಗಾಗಿ ಈ ಬಾರಿ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಎಡ ತೋರುಬೆರಳಿನ ಬದಲಿಗೆ ಹೆಬ್ಬೆರಳಿಗೆ ಅಳಿಸಲಾಗದ ಶಾಹಿ ಹಾಕಲಾಗುತ್ತದೆ. …. : , . 11, 2020 (..): . 22 27. - , . - , , , , , - .: / / : - - – -.