ಗುಡ್ ನ್ಯೂಸ್ ಕೊಟ್ಟ ಮದಗಜ ಚಿತ್ರತಂಡ ! ಬೆಂಗಳೂರು, ಡಿಸೆಂಬರ್ 11, 2020 (..):ಮದಗಜ ಚಿತ್ರತಂಡ ವಿಶಿಷ್ಟವಾಗಿ ತನ್ನ ಫಸ್ಟ್ ಲುಕ್ ರಿಲೀಸ್ ಡೇಟ್ ಘೋಷಣೆ ಮಾಡಿದೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ಆಶಿಕಾ ರಂಗನಾಥ್ ಮುಂದಿನ ಚಿತ್ರ ಮದಗಜ ತಂಡ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ. ಸಿನಿಮಾದ ಫಸ್ಟ್ ಲುಕ್ ಡಿಸೆಂಬರ್ 17 ರಂದು ಬೆಳಿಗ್ಗೆ 9.09 ಕ್ಕೆ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಉಮಾಪತಿ ಗೌಡ ನಿರ್ಮಾಣದಲ್ಲಿ ಮದಗಜ ಮೂಡಿಬರುತ್ತಿದೆ. ಫಸ್ಟ್ ಲುಕ್ ರಿಲೀಸ್ ವಿಷಯವನ್ನು ಶ್ರೀಮುರಳಿ ಘೋಷಿಸಿದ್ದಾರೆ.