ಜೆಡಿಎಸ್ ಬೃಹನ್ನಾಟಕದ ಸರದಾರರಿಗೆ “ವಿಶ್ವಾಸದ್ರೋಹಿಗಳು” ಹಣೆಪಟ್ಟಿ ಸೂಕ್ತ : ಕಾಂಗ್ರೆಸ್ ಟ್ವಿಟರ್ ನಲ್ಲಿ ಟೀಕೆ ಬೆಂಗಳೂರು,ಡಿಸೆಂಬರ್,10,2020(..): ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ಬೆಂಬಲಿಸಿದ ಜೆಡಿಎಸ್, ಒಕ್ಕಲುತನದವರಿಗೆ ಮರೆಲಾಗದ ದ್ರೋಹವೆಸಗಿದೆ ಎಂದು ಕಾಂಗ್ರೆಸ್ ಟ್ವೀಟರ್ ನಲ್ಲಿ ಟೀಕಿಸಿದೆ.ಜೆಡಿಎಸ್ ಸದನದ ಹೊರಗೆ ವಿರೋಧ, ಒಳಗೆ ಬೆಂಬಲ! ಇಂತಹ ಬೃಹನ್ನಾಟಕದ ಸರದಾರರಿಗೆ “ವಿಶ್ವಾಸದ್ರೋಹಿಗಳು” ಎಂಬ ಹಣೆಪಟ್ಟಿ ಸೂಕ್ತವೇ ಸರಿ ಎಂದು ವಾಗ್ದಾಳಿ ನಡೆಸಿದೆ. ಸಿದ್ದಾಂತವಿಲ್ಲದ ಜೆಡಿಎಸ್ ಪಕ್ಷ ಸ್ವಾರ್ಥ, ಸಮಯಸಾಧಕತನ, ಅವಕಾಶವಾದಿ ಧೋರಣೆಗಳನ್ನೇ ಸಿದ್ದಾಂತವಾಗಿಸಿಕೊಂಡಿದೆ ಎಂದು ಟ್ವೀಟ್ ಮಾಡಿದೆ. : ---------