5 ತಿಂಗಳಲ್ಲಿ ಸಿಎಂ ಬದಲಾಗಬಹುದು: ಕುಮಾರಸ್ವಾಮಿ ಮತ್ತೊಂದು ಆಟ ಆಡೋಣ ಅನ್ಕೊಂಡಿರಬೇಕು- ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವ್ಯಂಗ್ಯ… ಮೈಸೂರು,ಡಿಸೆಂಬರ್,10,2020(..):ಮುಂದಿನ 5 ತಿಂಗಳಲ್ಲಿ ಬಿಜೆಪಿಯಲ್ಲಿ ಬದಲಾವಣೆ ಆಗಬಹುದು. ಸಿಎಂ ಬದಲಾವಣೆ ಮಾಡಬಹುದು. ಆಗ ಯಡಿಯೂರಪ್ಪ 20 ಅಥವಾ 30 ಜನ ಆಚೆ ಕರೆದುಕೊಂಡು ಬಂದ್ರೆ ಆ ಸಮಯದಲ್ಲಿ ಹೆಚ್.ಡಿ ಕುಮಾರಸ್ವಾಮಿ ಬಿ.ಎಸ್.ವೈ ಜೊತೆ ಸೇರಬಹುದು. ಜೆ.ಡಿ.ಎಸ್ ನ 37 ಶಾಸಕರ ಜೊತೆ ಹೆಚ್.ಡಿ ಕುಮಾರಸ್ವಾಮಿ ಯಡಿಯೂರಪ್ಪ ಜೊತೆ ಸೇರಿ ಮತ್ತೊಂದು ಆಟ ಆಡೋಣ ಅನ್ಕೊಂಡಿರಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವ್ಯಂಗ್ಯವಾಡಿದರು. ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ. ಲಕ್ಷ್ಮಣ್, ಕುಮಾರಸ್ವಾಮಿಯವರ ಎಲ್ಲಾ ಆಟಗಳು ನಮಗೆ ಗೊತ್ತಿದೆ. ಕಾಂಗ್ರೆಸ್ ಮತ್ತೆ ಜೆಡಿಎಸ್ ಜೊತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ.ಈಗ ಸೋನಿಯಾ ಗಾಂಧಿಗೂ ಜೆ.ಡಿ.ಎಸ್ ಬಣ್ಣ ಗೊತ್ತಾಗಿದೆ. ಸಿಎಂ ಕುಮಾರಸ್ವಾಮಿ ಆಗಿದ್ದಾಗ ಬರೀ ಸುಳ್ಳು ಹೇಳಿದ್ದರು. ಯಾರಾದರೂ ಅರಮನೆ ಬರೆದುಕೊಡಿ ಎಂದಿದ್ದರೆ ಓಕೆ ಅನ್ನುತ್ತಿದ್ದರು. ಮುಂದೆ ಯಾವುದೇ ಕಾರಣಕ್ಕೆ ಜೆಡಿಎಸ್ ಜೊತೆ ಹೊಂದಾಣಿಕೆ ಇಲ್ಲ. ಹೈಕಮಾಂಡ್ ಸಹ ಹೊಂದಾಣಿಕೆಗೆ ಹೇಳುವುದಿಲ್ಲ. ಈ ಬಗ್ಗೆ ಕೆಪಿಸಿಸಿಯಿಂದ ಎಐಸಿಸಿಗೆ 200 ಪುಟದ ವರದಿ ಸಲ್ಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು. : - – 5 - – - -.