ಕೋವಿಡ್-19 ಪರೀಕ್ಷೆಗೆ ರಾಜ್ಯ ಸರ್ಕಾರದಿಂದ ಹೊಸ ದರ ನಿಗದಿ… ಬೆಂಗಳೂರು ,ಡಿಸೆಂಬರ್,9,2020(..): ರಾಜ್ಯ ಸರ್ಕಾರ ಕೋವಿಡ್-19 ಪರೀಕ್ಷೆಗೆ ಹೊಸ ದರಗಳ ನಿಗದಿ ಮಾಡಿ ಆದೇಶ ಹೊರಡಿಸಿದೆ. ಖಾಸಗಿ ಪ್ರಯೋಗಾಲಯಗಳ ವಿವಿಧ ಕೋವಿಡ್-19 ಪರೀಕ್ಷಾ ದರವನ್ನು ರಾಜ್ಯ ಸರ್ಕಾರ ಕಡಿತಗೊಳಿಸಿ ಆದೇಶಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಪರೀಕ್ಷೆ ಮತ್ತಷ್ಟು ಅಗ್ಗವಾಗಿದ್ದು, ಈಗ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ರೂ. 500 ಮಾತ್ರ ಆಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಕೋವಿಡ್-19 ಪರೀಕ್ಷೆಗಳನ್ನು ನಡೆಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಹಾಗೂ ಇತರೆ ಅಗತ್ಯ ವಸ್ತುಗಳ ದರಗಳನ್ನು ಪರಿಗಣಿಸಿ, ರಾಜ್ಯ ಸರ್ಕಾರವು ಖಾಸಗಿ ಪ್ರಯೋಗಶಾಲೆಗಳಲ್ಲಿ ವಿಧಿಸಬಹುದಾದ ಕೋವಿಡ್ ಪರೀಕ್ಷೆಗಳ ದರವನ್ನು ಈ ಕೆಳಗಿನಂತೆ ಪರಿಷ್ಕರಣೆ ಮಾಡಿ, ಆದೇಶಿಸಿದ್ದಾರೆ. : -19- - – - .