ಗೌರವದಿಂದ ಬದುಕು ನಡೆಸುವಂತಹ ಸಮಾಜ ಬೆಂಬಲಿಸಿ : ಶಾಸಕ ತನ್ವೀರ್ ಸೇಠ್ ಟ್ವೀಟ್ ಮೈಸೂರು,ಡಿಸೆಂಬರ್,10(..): ಮನುಷ್ಯರ ಜನ್ಮತಃ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಂಡು, ಪ್ರತಿಯೊಬ್ಬ ವ್ಯಕ್ತಿಯೂ ಗೌರವದಿಂದ ಬದುಕು ನಡೆಸುವಂತಹ ಸಮಾಜವನ್ನು ಬೆಂಬಲಿಸಿ ಎಂದು ಶಾಸಕ ತನ್ವೀರ್ ಸೇಠ್ ಟ್ವೀಟ್ ಮಾಡಿದ್ದಾರೆ. ‘ವಿಶ್ವ ಮಾನವ ಹಕ್ಕುಗಳ ದಿನ’ದ ಅಂಗವಾಗಿ ಟ್ವೀಟ್ ಮಾಡಿದ್ದು, ತಾರತಮ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರತಿರೋಧಿಸಿ, ಸತ್ಯ ಮತ್ತು ನ್ಯಾಯವನ್ನು ಎತ್ತಿ ಹಿಡಿಯುವ ಸಂಕಲ್ಪದೊಂದಿಗೆ ‘ವಿಶ್ವ ಮಾನವ ಹಕ್ಕುಗಳ ದಿನ’ವನ್ನು ಅರ್ಥಪೂರ್ಣವಾಗಿಸೋಣ ಎಂದು ಅಭಿಪ್ರಾಯಹಂಚಿಕೊಂಡಿದ್ದಾರೆ. : --------