ಪ್ರಧಾನಿ ಮಾಡಿ, ಸಿಎಂ ಮಾಡಿ ಎಂದು ಅರ್ಜಿ ಹಾಕಿಲ್ಲ-ಡಿ.ಕೆ ಶಿವಕುಮಾರ್ ಗೆ ಹೆಚ್.ಡಿ ಕುಮಾರಸ್ವಾಮಿ ಟಾಂಗ್… ಬೆಂಗಳೂರು,ಡಿಸೆಂಬರ್,9,2020(..):ಕಾಂಗ್ರೆಸ್ ಪಕ್ಷದ ಚಿಹ್ನೆ ಶಾಲುಗೆ ವ್ಯಾಲ್ಯೂ ಇಲ್ಲ ಎಂದಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಜೆಡಿಎಸ್ ನಾಯಕರನ್ನ ಪ್ರಧಾನಿ ಮತ್ತು ಸಿಎಂ ಮಾಡಿದ್ದು ನಮ್ಮ ಶಾಲು ಎಂದು ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಪ್ರಧಾನಿ ಮಾಡಿ, ಮುಖ್ಯಮಂತ್ರಿ ಮಾಡಿ ಎಂದು ನಾವು ಅರ್ಜಿ ಹಾಕಿರಲಿಲ್ಲ. ಅವರೇ ಬಂದಿದ್ರು. ನಾವು ಯಾರೂ ಸಹ ಅರ್ಜಿ ಹಾಕಿರಲಿಲ್ಲ. ದೇವೇಗೌಡರನ್ನ ಪ್ರಧಾನಿ ಮಾಡಿ ನಂತರ ಕೆಳಗಿಳಿಸಿದ್ದು ಯಾರು. ಮೊನ್ನೆ ನನಗೆ ಬೇಡಪ್ಪ ಅಂದ್ರು ಸಿಎಂ ಸ್ಥಾನ ಕೊಟ್ರು. ನಾವೇನು ಅರ್ಜಿ ಹಾಕಿರಲಿಲ್ಲ ಎಂದು ಟಾಂಗ್ ನೀಡಿದರು. ನಾನು ಹಗಲಿನಲ್ಲೇ ಸಿಎಂರನ್ನ ಭೇಟಿಯಾಗಿದ್ದೇನೆ. ಅವರ ಹಾಗೆ ಮಧ್ಯೆರಾತ್ರಿ ಹೋಗಿ ಭೇಟಿ ಮಾಡಿಲ್ಲ ಎಂದು ಡಿ.ಕೆ ಶಿವಕುಮಾರ್ ಗೆ ಹೆಚ್.ಡಿ ಕುಮಾರಸ್ವಾಮಿ ಚಾಟಿ ಬೀಸಿದರು. : ’ - – - - -.