ಅಭಿವೃದ್ಧಿ ಎಂಬ ಶಬ್ದವನ್ನೇ ಆಡದ ಕೇಳದ ಸಂಸದೆ ಶೋಭಾ ಕರಂದ್ಲಾಜೆ : ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮೈಸೂರು,ಡಿಸೆಂಬರ್,09,2020(..): ರಾಜಕೀಯ ಬದುಕಿನಲ್ಲಿ ಅಭಿವೃದ್ಧಿ ಎಂಬ ಶಬ್ದವನ್ನೇ ಆಡದ ಕೇಳದ ಸಂಸದೆ ಶೋಭಾ ಕರಂದ್ಲಾಜೆ ಅವರು ರೈತರನ್ನು ದೇಶದ್ರೋಹಿಗಳಿಗೆ ಹೋಲಿಸಿರುವುದು ಕೇಡುಗಾಲದ ಪರಮಾವಧಿ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟೀಕಿಸಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಭಯೋದ್ಪಾದಕರು ಬಂದ್ ನಲ್ಲಿ ಭಾಗವಹಿಸಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ತರ ಭವಿಷ್ಯವನ್ನು ಕತ್ತಲೆಗೆ ನೂಕಿ ಮತ್ತೆ ಅವರನ್ನೇ ದೇಶದ್ರೋಹಿ ಎನ್ನುತ್ತಿರುವ ಶೋಭಾ ಕರಂದ್ಲಾಜೆ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಟ್ವಿಟರ್ ನಲ್ಲಿ ಆಗ್ರಹಿಸಿದ್ದಾರೆ. : --------...