ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ಜೆಡಿಎಸ್ ಬೆಂಬಲ ವಿಚಾರ: ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದು ಹೀಗೆ…? ಬೆಂಗಳೂರು,ಡಿಸೆಂಬರ್,9,2020(..):ಭೂಸುಧಾರಣಾ ತಿದ್ದುಪಡಿ ಬಿಲ್ ಗೆ ಜೆಡಿಎಸ್ ಬೆಂಬಲ ನೀಡಿದ್ದು ಏಕೆ ಎಂಬುದನ್ನ ನಾಳೆ ವಿವರಿಸುತ್ತೇವೆ ಎಂದು ಜೆಡಿಎಸ್ ಎಂಎಲ್ ಸಿ ಬಸವರಾಜ ಹೊರಟ್ಟಿ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಬಸವರಾಜ ಹೊರಟ್ಟಿ, ನಿನ್ನೆ ನಾನು ವಿಧಾನ ಪರಿಷತ್ ನಲ್ಲಿ ಇರಲಿಲ್ಲ. ಒಂದಷ್ಟು ಗೊಂದಲವಾಗಿ ಕೆಲವರು ಬೆಂಬಲ ನೀಡಿದ್ದಾರೆ. ಜೆಡಿಎಸ್ ನ ಕೆಲ ಸದಸ್ಯರು ಬೆಂಬಲ ನೀಡಿರುವುದು ನಿಜ. ಹೆಚ್.ಡಿ.ಕುಮಾರಸ್ವಾಮಿ ಬೇಡಿಕೆ ಈಡೇರಿದೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು. ಇಂದಿನ ರಾಜಕಾರಣದಲ್ಲಿ ಸಿದ್ಧವಿದೆ. ಅಂದ್ಕೊಂಡಿದ್ದೀರಾ? ನಾವೂ ಕೂಡ ಅದಕ್ಕೆ ಹೊರತಾಗಿಲ್ಲ. ಕಲುಷಿತ ರಾಜಕಾರಣದಲ್ಲಿ ನಾನು ಏನೂ ಹೇಳುವುದಿಲ್ಲ ಎಂದು ಬಸವರಾಜ ಹೊರಟ್ಟಿ ತಿಳಿಸಿದರು. : - – - -