ರೈತರ ಇಂದಿನ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ… ಬೆಂಗಳೂರು,ಡಿಸೆಂಬರ್,9,2020(..):ಕೃಷಿ ತಿದ್ದುಪಡಿ ಕಾಯ್ದೆ ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ರೈತ ಮುಖಂಡ ಕೋಡಿಹಳ್ಳಿ ನೇತೃತ್ವದಲ್ಲಿ ರೈತರು ಬಾರುಕೋಲು ಚಳುವಳಿಯನ್ನ ನಡೆಸುತ್ತಿದ್ದಾರೆ. ಈ ಮಧ್ಯೆ ರೈತರ ಇಂದಿನ ಹೋರಾಟಕ್ಕೆ ಜೆಡಿಎಸ್ ಬೆಂಬಲವಿಲ್ಲ ಎಂದು ಮಾಜಿ ಸಿಎಂ ಹೆಚ್. ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮಾಧ್ಯಮಗಳ ಜತೆ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಭೂಸುಧಾರಣೆ ಕಾಯ್ದೆ ರೈತರಿಗೆ ಮಾರಕವಾಗುವಮತೆ ಅಂಶವಿಲ್ಲ, ಈಗ ಇದರಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದಾರೆ. ಈ ಕಾಯ್ದೆಯಿಂದ ದೊಡ್ಡ ಮಟ್ಟದ ಅಪಾಯವಿಲ್ಲ ಎಂದು ತಿಳಿಸಿದರು. ಭೂಸುಧಾರಣೆ ಕಾಯ್ದೆಗೆ ನಾನು, ಹೆಚ್.ಡಿ. ದೇವೇಗೌಡರು ಮೊದಲು ವಿರೋಧಿಸಿದ್ದೆವು.ಇದೀಗ ಹಲವು ಬದಲಾವಣೆಗಳನ್ನು ಮಾಡಿದ್ದಾರೆ. ರೈತರಿಗೆ ಭೂಸುಧಾರಣೆ ಕಾಯ್ದೆ ಬಗ್ಗೆ ಮಾಹಿತಿಯ ಕೊರತೆ ಇದೆ. ರೈತರ ಹೋರಾಟದಿಂದ ಸಮಾಜಕ್ಕೆ ಹಾನಿಯಾಗಬಾರದು. ನಾನು ಕೇಂದ್ರ ಸರಕಾರದ ಕಾಯ್ದೆ ಬಗ್ಗೆ ಮಾತನಾಡಲ್ಲ. ರಾಜ್ಯ ಸರ್ಕಾರದ ಕಾಯ್ದೆಗೆ ನಮ್ಮ ಬೆಂಬಲವಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. : – ’- –- -