ತಮಗೆ ದೊರೆತ ರಾಜ್ಯೋತ್ಸವ ಪ್ರಶಸ್ತಿಯ ಒಂದು ಲಕ್ಷ ರೂ. ಹಣವನ್ನು ಕೆಯುಡಬ್ಲ್ಯೂಜೆ ದತ್ತಿನಿಧಿಗೆ ಹಸ್ತಾಂತರಿಸಿದ ಟಿ.ವೆಂಕಟೇಶ್ ಬೆಂಗಳೂರು,ಡಿಸೆಂಬರ್,8,2020(..):ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಾಧ್ಯಮ ಕ್ಷೇತ್ರದ ಹಿರಿಯರು ಹಾಗೂ ಈ ಸಂಜೆ ಪತ್ರಿಕೆ ಸಂಪಾದಕರಾದ ಟಿ.ವೆಂಕಟೇಶ್ ಅವರು, ತಮಗೆ ದೊರೆತ ರಾಜ್ಯೋತ್ಸವ ಪ್ರಶಸ್ತಿಯ ಬಾಬ್ತು 1 ಲಕ್ಷ (ಒಂದು ಲಕ್ಷ) ಡಿಡಿ ಯನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ದತ್ತಿ ನಿಧಿಗೆ ಇಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರ ಮೂಲಕ ಹಸ್ತಾಂತರ ಮಾಡಿದ್ದಾರೆ. ಕೆಯುಡಬ್ಲ್ಯೂಜೆ ದತ್ತಿ ನಿಧಿಯಲ್ಲಿ ಒಂದು ಲಕ್ಷ ಹಣವನ್ನು ಠೇವಣಿಯಾಗಿರಿಸಿ, ಪ್ರತಿ ವರ್ಷದ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಈ ಸಂಜೆ ಪತ್ರಿಕೆ ಹೆಸರಿನಲ್ಲಿ ಪ್ರತಿಭಾನ್ವಿತ ಗ್ರಾಮೀಣ ಭಾಗದ ಪತ್ರಕರ್ತರೊಬ್ಬರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಭಿನಂದನೆ: ಕೆಯುಡಬ್ಲ್ಯೂಜೆ ಮೇಲೆ ಅಭಿಮಾನವಿರಿಸಿ ತಮಗೆ ದೊರೆತ ರಾಜ್ಯೋತ್ಸವ ಪ್ರಶಸ್ತಿಯ ಒಂದು ಲಕ್ಷ ಹಣವನ್ನು ಪ್ರಶಸ್ತಿ ದತ್ತಿ ನಿಧಿಗೆ ಸಮರ್ಪಣೆ ಮಾಡಲು ನಿರ್ಧರಿಸಿರುವುದನ್ನು ನಾಡಿನ ಪತ್ರಕರ್ತರ ಪರವಾಗಿ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಅಭಿನಂದಿಸಿದ್ದಾರೆ. : – 1 -- . -