ರೈತರ ಹೋರಾಟಕ್ಕೆ ಬೆಂಬಲ: ನಾಳೆ ರಾಜಭವನ ಮುತ್ತಿಗೆಗೆ ಕರವೇ ನಿರ್ಧಾರ… ಬೆಂಗಳೂರು,ಡಿಸೆಂಬರ್,8,2020(..):ಕೇಂದ್ರದ ಕೃಷಿ ತಿದ್ಧುಪಡಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ನಾಳೆ ರಾಜಭವನಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದೆ. ಈ ಕುರಿತು ಇಂದು ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ, ನಾಳೆ ರಾಜ್ಯಪಾಲರನ್ನು ಭೇಟಿ ಮಾಡಿ ರಾಷ್ಟ್ರಪತಿಗಳಿಗೆ ರೈತವಿರೋಧಿ ಮಸೂದೆ ವಾಪಾಸ್ ಗೆ ಒತ್ತಾಯಿಸಿ ಮನವಿ ಸಲ್ಲಿಸಲಿದ್ದೇವೆ. ಕಾಳ್ನಡಿಗೆ ಜಾಥಾ ಮೂಲಕ ತೆರಳುತ್ತೇವೆ. ಒಂದು ವೇಳೆ ಜಾಥವನ್ನ ತಡೆದರೇ ರಾಜಭವನಕ್ಕೆ ಮುತ್ತಿಗೆ ಹಾಕುವುದಾಗಿ ತಿಳಿಸಿದರು. ರೈತರ ಹೋರಾಟ ಬೆಂಬಲಿಸಿ ರೈತರ ಪರ ನಮ್ಮ ಮನವಿ ರಾಷ್ಟ್ರಪತಿಗಳಿಗೆ ತಲುಪಬೇಕು. ಹೀಗಾಗಿ ನಾಳೆ ಕಾಲ್ನಡಿಗೆ ಜಾಥಾ ಮೂಲಕ ತೆರಳಿ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದರು. : – - – --