ಮೈಸೂರಿನ ಪಂಚಗವಿ ಮಠಕ್ಕೆ ಆಡಳಿತಾಧಿಕಾರಿಗಳ ನೇಮಕ…. ಮೈಸೂರು,ಡಿಸೆಂಬರ್,8,2020(..):ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇರುವ ಪಂಚಗವಿ ಮಠಕ್ಕೆ ಆಡಳಿತಾಧಿಕಾರಿಗಳನ್ನ ನೇಮಕ ಮಾಡಿ ಮುಜರಾಯಿ ಇಲಾಖೆಯ ಅಧೀನ ಕಾರ್ಯದರ್ಶಿ ವರಲಕ್ಷ್ಮೀ ಅದೇಶ ಹೊರಡಿಸಿದ್ದಾರೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಪಂಚಗವಿ ಮಠದ ಅಸ್ತಿ ವಿಚಾರದಲ್ಲಿ ಅರೋಪದ ಕೇಳಿ ಬಂದ ಹಿನ್ನೆಲೆ, ಮಠದ ಆಸ್ತಿ ರಕ್ಷಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮೈಸೂರಿನ ಉಪ‌ವಿಭಾಗದ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮಠದ ಅಡಳಿತ ಅಧಿಕಾರಿಯಾಗಿ ನೇಮಕ ಮಾಡಿ ಮುಜರಾಯಿ ಇಲಾಖೆಯ ಅಧೀನ ಕಾರ್ಯದರ್ಶಿ ವರಲಕ್ಷ್ಮೀ ಅದೇಶ ಹೊರಡಿಸಿದ್ದಾರೆ. ಮಠಕ್ಕೆ ಸೇರಿದ ಕೃಷಿ ಜಮೀನು ಹಾಗೂ ಇತರೆ ಆಸ್ತಿಗಳ‌ ರಕ್ಷಣೆ ದೃಷ್ಠಿಯಿಂದ ಪಂಚಗವಿ ಮಠಕ್ಕೆ ಆಡಳಿತಾಧಿಕಾರಿಗಳನ್ನ ನೇಮಕ ಮಾಡಲಾಗಿದೆ. : – – – .