ಚರ್ಚಿಸಲು ಅನೇಕ ಸಮಸ್ಯೆಗಳಿದ್ದು, ಹೊಸ ಸಮಸ್ಯೆಯನ್ನು ಹುಟ್ಟುಹಾಕುತ್ತಿದ್ದಾರೆ : ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆ ಬೆಂಗಳೂರು,ಡಿಸೆಂಬರ್,06,2020(..): ನಾಳೆಯಿಂದ ಸದನ ಆರಂಭ, ಇನ್ನೂ ಅಜೆಂಡಾ ಗೊತ್ತಿಲ್ಲ. ಚರ್ಚಿಸಲು ಅನೇಕ ಸಮಸ್ಯೆಗಳಿದ್ದು, ಹೊಸ ಸಮಸ್ಯೆಯನ್ನು ಹುಟ್ಟುಹಾಕುತ್ತಿದ್ದಾರೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ಸಿದ್ದರಾಮಯ್ಯ ನಿವಾಸದಲ್ಲಿ ಸಭೆಯ ಬಳಿಕ ಅವರು ಮಾತನಾಡಿ, ಮೂರು ಬಾರಿ ಪ್ರವಾಹ ಸಮಸ್ಯೆ ಎದುರಾಗಿದೆ. ಆದರೆ, ಇದಕ್ಕೆ ಪರಿಹಾರ ನೀಡಿಲ್ಲ. ಈ ಕುರಿತು ಸದನದಲ್ಲಿ ಪ್ರಮುಖವಾಗಿ ಚರ್ಚಿಸಲಾಗುವುದು ಎಂದರು. ವಿದ್ಯುತ್ ಖರೀದಿಯಲ್ಲಿ ಅವ್ಯವಹಾರವಾಗಿದೆ. ಅನಗತ್ಯವಾಗಿ ವಿದ್ಯುತ್ ಖರೀದಿಯಾಗುತ್ತಿದೆ. ಮನೆಗಳ ನಿರ್ಮಾಣಕ್ಕೆ ಅನುದಾನ ನೀಡಿಲ್ಲ. ಬೇಕಾದವರಿಗೆ ಅನ್ ಲಾಕ್ ಮಾಡಿಕೊಡುತ್ತಾರೆ. ಕಾಂಗ್ರೆಸ್ ಪಕ್ಷದವರಿಗೆ ಲಾಕ್ ಮಾಡ್ತಾರೆ ಎಂದು ಕಿಡಿಕಾರಿದರು. :-----------