ನಾಳೆ ಭಾರತ್ ಬಂದ್ ಗೆ ಖಾಸಗಿ ಶಾಲೆಗಳ ಒಕ್ಕೂಟದಿಂದ ಬೆಂಬಲ: ಆನ್ ಲೈನ್ ಕ್ಲಾಸ್ ಇರಲ್ಲ… ಬೆಂಗಳೂರು,ಡಿಸೆಂಬರ್,7,2020(..):ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ರೈತ ಸಂಘಟನೆಗಳು ನಾಳೆ ಭಾರತ್ ಬಂದ್ ಗೆ ಕರೆ ನೀಡಿದ್ದು ವಿವಿಧ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ. ಇದೀಗ ನಾಳೆ ರೈತರು ಕರೆ ನೀಡಿರುವ ಭಾರತ ಬಂದ್ ಗೆ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟ ಬೆಂಬಲ ನೀಡಿದೆ. ನಾಳಿನ ಬಂದ್ ಗೆ ಖಾಸಗಿ ಶಾಲೆಗಳು ಬೆಂಬಲ ಸೂಚಿಸಿದ್ದು, ನಾಳೆ ಆನ್ಲೈನ್ ಕ್ಲಾಸ್ ನಡೆಸುವುದಿಲ್ಲ. ಬಂದ್ ಹಿನ್ನಲೆಯಲ್ಲಿ ನಾಳೆ ನಿಗದಿಯಾದ ಪರೀಕ್ಷೆಗಳು ಹೊರತುಪಡಿಸಿ ನಾಳೆ ಆನ್ಲೈನ್ ಕ್ಲಾಸ್ ನಡೆಯುವುದಿಲ್ಲ. ರೈತರ ಹೋರಾಟ ಬೆಂಬಲಿಸಿ ನಾಳೆ ಆನ್ಲೈನ್ ಕ್ಲಾಸ್ ಬಂದ್ ಮಾಡಲಾಗುವುದು ಎಂದು ಖಾಸಗಿ ಶಾಲೆ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದಾರೆ. ಇನ್ನು ಭಾರತ್ ಬಂದ್ ಗೆ ಓಲಾ ಊಬರ್ ಹಾಗೂ ಆಟೋ ಚಾಲಕರ ಸಂಘ ನೈತಿಕ ಬೆಂಬಲ ಸೂಚಿಸಿವೆ. ಅಂಗನವಾಡಿ ಕಾರ್ಯಕರ್ತೆಯರು ಕೂಡ ಬಂದ್ ಗೆ ಬೆಂಬಲಿಸಿ ಸಾಥ್ ನೀಡಿದ್ದಾರೆ. ಈ ಮಧ್ಯೆ ನಾಳೆ ಕರ್ನಾಟಕದಲ್ಲೂ ಬಂದ್ ಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರೆ ನೀಡಿದೆ. … : , . 7, 2020 (..): , . ’ . , , ., , ’ . , .: / / : –- – -- - .