ವಿದ್ಯಾರಣ್ಯಪುರಂ ರಸ್ತೆ ಅಭಿವೃದ್ಧಿ ಕಾಮಗಾರಿ : ಶಾಸಕ ಎಸ್.ಎ.ರಾಮದಾಸ್ ಚಾಲನೆ ಮೈಸೂರು,ಡಿಸೆಂಬರ್,06,2020(..): ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಿದ್ಯಾರಣ್ಯಪುರಂ 16ನೇ ಕ್ರಾಸ್ ನಿಂದ ಭೂತಾಳೇ ಮೈದಾನದ ಮಾರ್ಗವಾಗಿ 766 ನಂಜನಗೂಡು ರಸ್ತೆವರೆಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರಾಜ್ಯ ಸರಕಾರದ ಅನುದಾನದಲ್ಲಿ ವಿದ್ಯಾರಣ್ಯಪುರಂ 16ನೇ ಕ್ರಾಂಸ್ ನಿಂದ ಊಟಿ ರಸ್ತೆಯ ಸಂಪರ್ಕ ಸಾಧಿಸುವ ರಸ್ತೆ ಹಾಗೂ ರಸ್ತೆಯ ಎರಡು ಕಡೆ ಚರಂಡಿ ಹಾಗೂ ಫುಟ್ ಪಾತ್ ನಿರ್ಮಾಣ ಮಾಡುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಎರಡು ಕಿ.ಮೀಗೆ ಅಭಿವೃದ್ಧಿಗೆ ಎರಡುವರೆ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಹಮ್ಮಿಕೊಳ್ಳಲಾಗಿದೆ. ಎರಡು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ಈ ಸಂದರ್ಭ ಪಾಲಿಕೆ ಸದಸ್ಯರು ಹಾಗೂ ಗುತ್ತಿಗೆದಾರ ಪಿ.ವೆಂಕಟರೆಡ್ಡಿ ಇತರರು ಇದ್ದರು. :---- ..-