ಬಿಎಸ್ ವೈ ಇರುವಾಗ ಬೇರೆಯವರಿಗೆ ಸಿಎಂ ಸ್ಥಾನ ನೀಡುತ್ತಿರಲಿಲ್ಲ- ಡಿಸಿಎಂ ಅಶ್ವಥ್ ನಾರಾಯಣ್… ಬೆಂಗಳೂರು,ಡಿಸೆಂಬರ್,5,2020(..):ಬಿಜೆಪಿ ಜತೆ ಇದ್ಧಿದ್ದರೇ ಈಗಲೂ ಸಿಎಂ ಆಗಿರುತ್ತಿದೆ ಎಂಬ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಅಶ್ವಥ್ ನಾರಾಯಣ್, ಬಿಎಸ್ ವೈ ಇರುವಾಗ ನಮ್ಮ ಪಕ್ಷದಲ್ಲಿ ಬೇರೆಯವರಿಗೆ ಸಿಎಂ ಸ್ಥಾನ ನೀಡುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಜತೆ ಮೈತ್ರಿ ಮಾಡಿ ಹಾಳಾದೆ ಎಂದು ಹೆಚ್.ಡಿ ಕುಮಾರಸ್ವಾಮಿ ಆರೋಪ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಕಾಂಗ್ರೆಸ್ ಬಗ್ಗೆ ತಿಳಿಸುವ ಕೆಲಸ ಮಾಡಿದ್ದಾರೆ. ನಿಧಾನವಾಗಿ ತಡವಾಗಿ ಅವರಿಗೆ ಅರಿವಾಗಿದೆ. ಯಾವ ರೀತಿ ಕಾಲೆಳೆದರು. ಅವರು ಕಾಂಗ್ರೆಸ್ ಜತೆ ಹೋಗಿ ಮೋಸಕ್ಕೊಳಗಾದರು. ಅವರು ತಮ್ಮ ನೋವಿನ ಬಗ್ಗೆ ಹೇಳಿದ್ದಾರೆ ಎಂದರು. ಜೆಡಿಎಸ್ ಗೆ ಕಾಂಗ್ರೆಸ್ ವಿರೋಧಿ ಮತಗಳು ಬರುತ್ತಿತ್ತು. ಇದನ್ನ ಮರೆತು ಕಾಂಗ್ರೆಸ್ ಜತೆ ಜೆಡಿಎಸ್ ಕೈಜೋಡಿಸಿತು. ಇದರ ಪ್ರತಿಫಲವನ್ನ ಈಗ ಅನುಭವಿಸುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಿಂದ ಹೆಚ್.ಡಿಕುಮಾರಸ್ವಾಮಿ ಬೇಸತ್ತಿದ್ದರು. ಹೀಗಾಗಿ 17 ಮಂದಿ ಶಾಸಕರು ರಾಜೀನಾಮೆ ನೀಡಿ ಹೊರಬಂದರು ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು. : - – - - .