‘ಯುವರತ್ನ’ ಪವರ್ ಫುಲ್ ಸಾಂಗಿಗೆ ಪವರ್ ಸ್ಟಾರ್ ಅಪ್ಪು ದನಿ ! ಬೆಂಗಳೂರು, ಡಿಸೆಂಬರ್ 05, 2020 (..): ಯುವರತ್ನ ಸಿನಿಮಾದ ಪವರ್ ಫುಲ್ ಹಾಡಿಗೆ ಧ್ವನಿಯಾಗಿದ್ದಾರೆ ಪವರ್ ಸ್ಟಾರ್ ಅಪ್ಪು. ಮೊನ್ನೆಯಷ್ಟೇ ಯುವರತ್ನ ಸಿನಿಮಾದ ಪವರ್ ಆಫ್ ಯೂಥ್ ಹಾಡು ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಮತ್ತೊಂದು ಹಾಡಿನ ಧ್ವನಿ ಮುದ್ರಣವಾಗಿದೆ. ಊರಿಗೊಬ್ಬ ರಾಜ ಎಂಬ ಮಾಸ್ ಹಾಡನ್ನು ಪುನೀತ್ ಹಾಡಿದ್ದಾರೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಸಂಗೀತ ನಿರ್ದೇಶಕ ತಮನ್ ಎಸ್. ಪುನೀತ್ ಅದ್ಭುತವಾಗಿ ಹಾಡಿದ್ದಾರೆ ಎಂದಿದ್ದಾರೆ.