‘ಪೋರ್ಡ್’ನಲ್ಲಿ ಜಾಲಿ ರೈಡ್ ಮಾಡಿಸಿದ ದಚ್ಚುಗೆ ಥ್ಯಾಂಕ್ಸ್ ಹೇಳಿದ ಶೆಟ್ರು ಬೆಂಗಳೂರು, ಡಿಸೆಂಬರ್ 05, 2020 (..): ನಟ, ನಿರ್ದೇಶಕ ರಿಷಬ್ ಶೆಟ್ಟಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಥ್ಯಾಂಕ್ಸ್ ಹೇಳಿದ್ದಾರೆ! ರಿಷಬ್ ದಚ್ಚುಗೆ ಥ್ಯಾಂಕ್ಸ್ ಹೇಳಲು ಕಾರಣ ಕಾರ್ ರೈಡ್ ! ಯೆಸ್. ರಿಷಬ್ ರ ಡ್ರೀಮ್ ಕಾರು ಪೋರ್ಡ್ ಮುಸ್ತಾಂಗ್ ಜಿಟಿಯಲ್ಲಿ ದರ್ಶನ್ ಜಾಲಿ ರೈಡ್ ಮಾಡಿಸಿ ಖುಷಿಕೊಟ್ಟಿದ್ದಾರೆ. ಈ ಖುಷಿಯನ್ನು ನಾನು ವರ್ಣಿಸಲು ಸಾಧ‍್ಯವಿಲ್ಲ. ಥ್ಯಾಂಕ್ಯೂ ದರ್ಶನ್ ಸರ್ ಎಂದು ರಿಷಬ್ ಬರೆದುಕೊಂಡಿದ್ದಾರೆ.ಇನ್ನು, ರಿಷಬ್ ಜತೆಗೆ ನಟ ಪ್ರಮೋದ್ ಶೆಟ್ಟಿ, ನಿರ್ಮಾಪಕ ಸಂದೇಶ ನಾಗರಾಜ್ ಕೂಡಾ ಇದ್ದರು. ನಿರ್ದೇಶಕ, ನಟ ರಿಷಬ್ ಶೆಟ್ಟಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ನಿನ್ನೆ ಸಂಜೆ ಜಾಲಿ ಕ್ಷಣಗಳನ್ನು ಕಳೆದಿದ್ದಾರೆ.