ಡಿ.6 ರಂದು ಲಾಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆ ವತಿಯಿಂದ 2021ರ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ.. ಮೈಸೂರು,ಡಿಸೆಂಬರ್,4,2020(..):ಲಾಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆ ವತಿಯಿಂದ 2021ರ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಸಮಾರಂಭವನ್ನ ಡಿಸೆಂಬರ್ 6ರಂದು ಆಯೋಜಿಸಲಾಗಿದೆ. ನಗರದ ಜಿಲ್ಲಾಪಂಚಾಯತ್ ಬಳಿ ಇರುವ ಹೊಟೇಲ್ ಏರ್ ಲೈನ್ಸ್ ಸಭಾಂಗಣದಲ್ಲಿ ಕನ್ನಡ ಕಾನೂನು ಮಾಸ ಪತ್ರಿಕೆ ವತಿಯಿಂದ 2021ರ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆ ಸಮಾರಂಭ ಆಯೋಜಿಸಲಾಗಿದ್ದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಿವೃತ್ತ ಪ್ರದಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಸಿ.ಜಿ ಹುನಗುಂದ ಅವರು ಆಗಮಿಸಲಿದ್ದಾರೆ. ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಡಿಸಿಪಿ ಎ.ಎನ್ ಪ್ರಕಾಶ್ ಗೌಡ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಸಿಐಡಿ ಡಿವೈಎಸ್ ಪಿ ಕೆ.ಎನ್ ಯಶವಂತ ಕುಮಾರ್, ರಘುಲಾಲ್ ಅಂಡ್ ಕಂಪನಿ ಮಾಲೀಕರಾದ ಸಿ.ಎನ್ ರಾಘವನ್, ಹಿರಿಯ ವರದಿಗಾರರಾದ ಕೆ.ಪಿ ನಾಗರಾಜ್, ಮೈಸೂರು ವಕೀಲರಾದ ಡಿ.ಆರ್ ಕರೀಗೌಡ ಅವರನ್ನ ಸನ್ಮಾನಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಲಾಗೈಡ್ ಕನ್ನಡ ಕಾನೂನು ಮಾಸ ಪತ್ರಿಕೆ ಗೌರವ ಸಂಪಾದಕ ಮಾಜಿ ಸಚಿವ ಎ.ಮಂಜು, ಹಿರಿಯ ವಕೀಲರಾದ ಎಂ.ಡಿ ಹರೀಶ್ ಕುಮಾರ್ ಹೆಗ್ಡೆ ಪಾಲ್ಗೊಳ್ಳಲಿದ್ದಾರೆ ಎಂದು ಹೆಚ್.ಎನ್ ವೆಂಕಟೇಶ್ ತಿಳಿಸಿದ್ದಾರೆ. : -2021 –- - -