ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು- ವಿವಾದಾತ್ಮಕ ಹೇಳಿಕೆ ನೀಡಿದ ಕೃಷಿ ಸಚಿವ ಬಿ.ಸಿ ಪಾಟೀಲ್… ಕೊಡಗು,ಡಿಸೆಂಬರ್ 3,2020(..):ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಹೇಳಿಕೆ ನೀಡುವ ಮೂಲಕ ಕೃಷಿ ಸಚಿವ ಬಿ.ಸಿ ಪಾಟೀಲ್ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಕೊಡಗು ಜಿಲ್ಲೆ ಮಡಿಕೇರಿಯ ಪೊನ್ನಂಪೇಟೆಯಲ್ಲಿ ಇಂದು ಮಾತನಾಡಿದ ಸಚಿವ ಬಿ.ಸಿ ಪಾಟೀಲ್ ಈ ರೀತಿ ಹೇಳಿಕೆ ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು. ಹೆಂಡತಿ ಮಕ್ಕಳನ್ನ ನೋಡಿಕೊಳ್ಳದವರು ಹೇಡಿಗಳು. ಯಾವಾಗಲೂ ಹೇಡಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದ್ದು ಈಸಬೇಕು. ಈಜಿ ಜಯಸಬೇಕು ಎಂದು ಹೇಳಿದ್ದಾರೆ. ಕೃಷಿ ಮಾಡಿ ಉತ್ತಮ ಜೀವನ ನಡೆಸುವ ರೈತರಿದ್ದಾರೆ. ಆದರೆ ಏನೇ ಸಮಸ್ಯೆ ಇದ್ದರೂ ಇದ್ದು ಈಸಬೇಕು. ಈಜಿ ಜಯಸಬೇಕು. ರೈತರು ಹೇಡಿ ಕೆಲಸ ಮಾಡಬಾರದು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ. … “ ” – , . 3, 2020 (..): .. . “ ’ . . .”: / .. / / : – – - - – .