ಅಮೆರಿಕಾದ ಕ್ರಿಕೆಟ್ ಟೀಂ ಖರೀದಿಸಿದ ಶಾರುಖ್ ಖಾನ್ ಮುಂಬೈ, ಡಿಸೆಂಬರ್ 03, 2020 (..):ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅಮೆರಿಕಾದ ಕ್ರಿಕೆಟ್ ಟೀಂ ಒಂದನ್ನು ಖರೀದಿಸಿದ್ದಾರೆ. ಎಸ್ ಆರ್ ಕೆ ಲಾಸ್ ಎಂಜೆಲಿಸ್ ಕ್ರಿಕೆಟ್ ತಂಡದ ಫ್ರಾಂಚೈಸ್ ಅನ್ನು ಖರೀದಿ ಮಾಡಿದ್ದಾರೆ. ಸದ್ಯದಲ್ಲೇ ಅಮೇರಿಕಾದಲ್ಲಿ ದೊಡ್ಡ ಮಟ್ಟದ ಸರಣಿಯೊಂದು ಶುರುವಾಗಲಿದೆ. ಈ ಸರಣಿಯಲ್ಲಿ ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ, ವಾಷಿಂಗ್ಟನ್ ಡಿ ಸಿ, ಚಿಕಾಗೋ, ಡಲ್ಲಾಸ್ ಹಾಗು ಲಾಸ್ ಎಂಜೆಲಿಸ್ ತಂಡಗಳು ಪಾಲ್ಗೊಳ್ಳಲಿವೆ. ಮೂಲಗಳ ಪ್ರಕಾರ ಲಾಸ್ ಎಂಜೆಲಿಸ್ ತಂಡಕ್ಕೆ ಎಲ್ ಎ ನೈಟ್ ರೈಡರ್ಸ್ ಎಂದು ಹೆಸರಿಡಲಾಗಿದೆ.