ಹೆಚ್.ವಿಶ್ವನಾಥ್ ಜತೆ ಬಿಜೆಪಿ ಪಕ್ಷ ನಿಲ್ಲುತ್ತೆ- ಸಚಿವ ರಮೇಶ್ ಜಾರಕಿಹೊಳಿ ಭರವಸೆ… ಬೆಳಗಾವಿ, ಡಿಸೆಂಬರ್,2,2020(..):ಹೆಚ್.ವಿಶ್ವನಾಥ್ ಸಚಿವರಾಗಲು ಅನರ್ಹ ಎಂದು ಹೈಕೋರ್ಟ್ ಆದೇಶ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಹೆಚ್.ವಿಶ್ವನಾಥ್ ಪರ ಬಿಜೆಪಿ ನಿಲ್ಲತ್ತೆ ಎಂದು ಭರವಸೆ ನೀಡಿದ್ದಾರೆ. ಸರ್ಕಾರದ ವಿರುದ್ಧ ಹೆಚ್.ವಿಶ್ವನಾಥ್ ಅಸಮಾಧಾನ ಹೊರ ಹಾಕಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ರಮೇಶ್ ಜಾರಕಿಹೊಳಿ, ಸರ್ಕಾರದ ವಿರುದ್ಧ ಹೆಚ್.ವಿಶ್ವನಾಥ್ ಮಾತನಾಡಿಲ್ಲ. ನಾನು ಅವರು ಮಾತನಾಡಿರುವುದನ್ನ ನೋಡಿದ್ದೇನೆ. ಸರ್ಕಾರದ ವಿರುದ್ದವಾಗಿ ಹೇಳಿಕೆ ನೀಡಿಲ್ಲ. ಅವರ ಪರವಾಗಿ ಬಿಜೆಪಿ ನಿಲ್ಲುತ್ತದೆ ಎಂದರು. ಸಿಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ಕುರಿತು ಪ್ರತಿಕ್ರಿಯಿಸಿದ ಸಚಿವ ರಮೇಶ್ ಜಾರಕಿಹೊಳಿ, ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಸಿಪಿ ವೈ ಅವರನ್ನ ಸಚಿವರನ್ನಾಗಿ ಮಾಡ್ತೀನಿ ಅಂದಿದ್ದಾರೆ. ಈ ಬಗ್ಗೆ ಅವರನ್ನೇ ಕೇಳಬೇಕು ಎಂದು ನುಡಿದರು. : - –- . - -