ರಸ್ತೆಗೆ ಬಂದು ನಿಂತ ಬೃಹತ್ ಗಾತ್ರದ ಆಮೆ : ವಾಯುವಿಹಾರಿಗಳಿಂದ ರಕ್ಷಣೆ…. ಮೈಸೂರು, ಡಿಸೆಂಬರ್,2,2020(..):ಸಾಂಸ್ಕೃತಿಕ ನಗರಿ ಮೈಸೂರಿನ ಕುಕ್ಕರಹಳ್ಳಿ ಕೆರೆಯ ರಸ್ತೆ ಮಧ್ಯೆ ಬಂದು ನಿಂತಿದ್ಧ ಬೃಹತ್ ಗಾತ್ರದ ಆಮೆಯನ್ನ ಅಲ್ಲಿದ್ಧ ವಾಯುವಿಹಾರಿಗಳು ರಕ್ಷಿಸಿ ಮತ್ತೆ ಕೆರೆಗೆ ಬಿಟ್ಟರು. ಕುಕ್ಕರಹಳ್ಳಿ ಕೆರೆಯಿಂದ ಬೃಹತ್ ಗಾತ್ರದ ಆಮೆ ಬಂದು ರಸ್ತೆ ಮಧ್ಯೆದಲ್ಲಿ ಪ್ರತ್ಯೆಕ್ಷವಾಗಿದ್ದು, ಕತ್ತಲಿನಲ್ಲಿ ಆಮೆ ಕಂಡು ವಾಯುವಿಹಾರಿಗಳು ಸ್ವಲ್ಪಕಾಲ ಗಾಬರಿಗೊಂಡರು. ನಂತರ ಅದು ಆಮೆ ಎಂದು ಖಚಿತವಾದ ಬಳಿಕ ಅದನ್ನು ರಕ್ಷಣೆ ಮಾಡಿ ಮತ್ತೆ ಕೆರೆಯ ನೀರಿಗೆ ಬಿಟ್ಟ ಘಟನೆ ನಡೆಯಿತು. ಕುಕ್ಕರಹಳ್ಳಿ ಕೆರೆ ಬೃಹತ್ ಗಾತ್ರದ ಆಮೆಗಳ ಅವಾಸ ಸ್ಥಾನವಾಗಿದೆ. : - - - –-