ಜಿಟಿಡಿ ದುಡ್ಡು ಪಡೆದು ಬಿಜೆಪಿ ಪರ ಕೆಲಸ ಮಾಡಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದು ಹೀಗೆ… ಮೈಸೂರು,ಡಿಸೆಂಬರ್,2,2020(..):ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರು ದುಡ್ಡು ಪಡೆದು‌ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದರು ಎಂಬ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆ ಕುರಿತು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ. ದುಡ್ಡು ಹಂಚಿ ನಾವು ಚುನಾವಣೆ ಮಾಡುತ್ತಾರೆ ಎಂಬುದನ್ನ‌ ಸಿದ್ದರಾಮಯ್ಯ ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ. ಮೋದಿ ಅವರ ಹವಾ ಮುಂದೆ ಸಿದ್ಧರಾಮಯ್ಯ ಅವರ ಹಣದ ಆಟ ನಡೆದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದರು. ಉಪ‌ಚುನಾವಣೆಯಲ್ಲಿ ಬಿಜೆಪಿ ಮೇಲೆ‌ ಆರೋಪ ಮಾಡುವ ಕಾಂಗ್ರೆಸ್ಸಿಗರು ಸಿದ್ದರಾಮಯ್ಯನವರ ಈ‌ ಹೇಳಿಕೆ ಬಗ್ಗೆ ಏನ್ ಹೇಳುತ್ತಾರೆ. ನನ್ನ ಎರಡು ಚುನಾವಣೆಯಲ್ಲು ಸಿದ್ದರಾಮಯ್ಯನವರು ದುಡ್ಡಿನ ಮೂಲಕವೇ ನಡೆಸಿದರು ಎಂಬುದು ಈಗ ಬಯಲಾಗಿದೆ ಎಂದು ಚಾಟಿ ಬೀಸಿದರು. ಸಿದ್ಧರಾಮಯ್ಯ ಹೇಳಿಕೆ ಕುರಿತು ನಿನ್ನೆ ಪ್ರತಿಕ್ರಿಯಿಸಿದ್ಧ ಶಾಸಕ ಜಿ.ಟಿ ದೇವೇಗೌಡರು, ನಾನು ದುಡ್ಡು ಪಡೆದಿದ್ದೇನೆ ಎನ್ನುವುದನ್ನ ವಿವರವಾಗಿ ಸ್ಪಷ್ಟಪಡಿಸಲಿ. ರಾಜಕೀಯದಲ್ಲೇ ಇರುವುದಿಲ್ಲ ಎಂದು ತಿರುಗೇಟು ನೀಡಿದ್ದರು. : - – - - – -