ಇಂದು ಅಪ್ಪು ಫ್ಯಾನ್ಸ್’ಗೆ ಕಾದಿದೆ ಗುಡ್ ನ್ಯೂಸ್ ! ಬೆಂಗಳೂರು, ಡಿಸೆಂಬರ್ 02, 2020 (..):ಅಪ್ಪು ಫ್ಯಾನ್ಸ್’ಗೆ ಇಂದು ಗುಡ್ ನ್ಯೂಸ್ ಕಾದಿದೆ! ಹೌದು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾದ ಪವರ್ ಆಫ್ ಯೂಥ್ ಹಾಡು ಇಂದು ರಿಲೀಸ್ ಆಗಲಿದೆ. ಯೂಥ್ ಹಾಡಿನ ಲಿರಿಕಲ್ ವಿಡಿಯೋ ಇಂದು ಮಧ್ಯಾಹ್ನ 2.12 ಕ್ಕೆ ಹೊಂಬಾಳೆ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಹಾಡಿನ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು, ಗಮನ ಸೆಳೆದಿದೆ. ಈ ಪವರ್ ಫುಲ್ ಹಾಡು ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎಂಬ ನಂಬಿಕೆಯಲ್ಲಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮನ್. ಈ ಹಾಡಿಗೆ ತಮನ್ ಸಂಗೀತ ಸಂಯೋಜಿಸಿದ್ದಾರೆ.