12 ಸಾವಿರ ರನ್’ಗಳ ಸರದಾರ: ಸಚಿನ್ ದಾಖಲೆ ಮುರಿದ ಕೊಹ್ಲಿ… ಬೆಂಗಳೂರು, ಡಿಸೆಂಬರ್ 02, 2020 (..):ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಬುಧವಾರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ವೇಗವಾಗಿ 12,000 ರನ್​ ಗಳಿಸಿದ್ದಾರೆ. ಕ್ಯಾನ್‌ ಬೆರಾದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಈ ಪಂದ್ಯಕ್ಕೂ ಮೊದಲು 11,977 ರನ್ ಗಳಿಸಿದ್ದರು. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿಲು ಮುಂದಾದ ಬಳಿಕ ಕ್ರೀಸ್‌ಗೆ ಬಂದ ಕೂಡಲೇ ಈ ಮೈಲುಗಲ್ಲು ಸಾಧಿಸಿದ್ದಾರೆ. ವಿರಾಟ್​ ಕೊಹ್ಲಿ ತಮ್ಮ 242ನೇ ಇನ್ನಿಂಗ್‌ನಲ್ಲಿ ಈ ಮೈಲಿಗಲ್ಲು ಸಾಧಿಸಿದ್ದು, ಇದರಿಂದಾಗಿ ಮಾಸ್ಟರ್​ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್ ಅವರು ನಿರ್ಮಿಸಿದ ಹಿಂದಿನ ದಾಖಲೆಯನ್ನು ಬ್ರೇಕ್​ ಮಾಡಿದ್ದಾರೆ. ಸಚಿನ್​ ತಮ್ಮ 300ನೇ ಇನ್ನಿಂಗ್‌ನಲ್ಲಿ 12,000ನೇ ರನ್ ದಾಖಲಿಸಿದ್ದರು. ….. 12,000 - . 3rd - . 11,977 . 242 , ’ . 12,000 300 .