ಸಂಸ್ಥೆ ನಿರ್ದೇಶಕಿ ಡಾ.ಪುಷ್ಪಾವತಿ ಅವರಿಗೆ ಮತ್ತೊಂದು ಗರಿ. ಮೈಸೂರು, ಏ.22, 2024 : (.. ) ನಗರದ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಅವರು 2024-25ನೇ ಸಾಲಿಗೆ “ ಸೀಳು ತುಟಿ ಮತ್ತು ಸೀಳು ಅಂಗುಳು ಮತ್ತು ಸಂಬಂಧಿತ ಕ್ರೇನಿಯೋಫೇಷಿಯಲ್ ವೈಪರೀತ್ಯಗಳ ಭಾರತೀಯ ಸೊಸೈಟಿ” ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಳೆದ ೨೨ ವರ್ಷಗಳಿಂದ ಅಸ್ಥಿತ್ವದಲ್ಲಿರುವ ಈ ಸಂಘ , ಸೀಳು ತುಟಿ ಮತ್ತು ಸೀಳು ಅಂಗುಳು ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಇದೀಗ ಈ ಸಂಘದ ಉಪದಾಧ್ಯಕ್ಷರಾಗಿ ಮೈಸೂರು ಐಶ್‌ ನ ನಿರ್ದೇಶಕಿ ಹಾಗೂ ವಾಕ್‌ ಭಾಷಾ ತಜ್ಞರಾದ ಡಾ. ಪುಷ್ಪಾವತಿ ಆಯ್ಕೆಗೊಂಡಿದ್ದಾರೆ. ಕಳೆದ ೨೨ ವರ್ಷಗಳ ಬಳಿಕ “ 𝐈𝐧𝐝𝐢𝐚𝐧 𝐬𝐨𝐜𝐢𝐞𝐭𝐲 𝐨𝐟 𝐜𝐥𝐞𝐟𝐭 𝐥𝐢𝐩 𝐩𝐚𝐥𝐚𝐭𝐞 𝐚𝐧𝐝 𝐫𝐞𝐥𝐚𝐭𝐞𝐝 𝐜𝐫𝐚𝐧𝐢𝐨𝐟𝐚𝐜𝐢𝐚𝐥 𝐚𝐧𝐨𝐦𝐚𝐥𝐢𝐞𝐬 “ ಸಂಘದ ಉಪಾಧ್ಯಕ್ಷರಾಗಿ ವಾಕ್‌ ಭಾಷಾ ತಜ್ಞರು ನೇಮಕಗೊಂಡಿರುವುದು ಇದು ೨ ನೇ ಸಲ. ಪ್ರತಿ ವರ್ಷ ಈ ಸಂಘಕ್ಕೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತದೆ. ಉಪಾಧ್ಯಕ್ಷರಾಗಿ ಆಯ್ಕೆಗೊಂಡವರೇ ಮುಂದಿನ ವರ್ಷ ಅಧ್ಯಕ್ಷರಾಗಿ ನೇಮಕಗೊಳ್ಳುವರು. ಈ ಹಿನ್ನೆಲೆಯಲ್ಲಿ ೨೦೨೫-೨೬ ನೇ ಸಾಲಿಗೆ ಡಾ.ಪುಷ್ಪಾವತಿ ಅವರೇ ಅಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆ ಎಂಬುದು ವಿಶೇಷ. ಹಿನ್ನೆಲೆ : ರಾಜ್ಯದ ಮೈಸೂರು ನಗರದಲ್ಲಿ ನೆಲೆಗೊಂಡಿರುವ ವಾಕ್ ಮತ್ತು ಶ್ರವಣ ದೋಷಗಳ ಅಖಿಲ ಭಾರತ ಮಟ್ಟದ ಚಿಕಿತ್ಸಾ ಕೇಂದ್ರ (ಆಯಿಶ್). ಮಾತಿನ ತೊಂದರೆ, ಕಿವುಡತನ ಇತ್ಯಾದಿ ನ್ಯೂನತೆಗಳನ್ನು ಸರಿಪಡಿಸುವುದು ಹಾಗೂ ಆ ಬಗ್ಗೆ ಶಿಕ್ಷಣ ನೀಡುವುದು, ಸಂಶೋಧನೆ ನಡೆಸುವುದು ಈ ಸಂಸ್ಥೆಯ ಮುಖ್ಯ ಕಾರ್ಯ. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಈ ಸಂಸ್ಥೆ 1966ರ ಅಕ್ಟೋಬರ್ ತಿಂಗಳಿನಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಂಡಿತು. ಮೊದಲಿಗೆ ಮೈಸೂರು ನಗರದ ಝಾನ್ಸಿಲಕ್ಷೀಬಾಯಿ ರಸ್ತೆಯಲ್ಲಿರುವ ರಾಮಮಂದಿರ ಹಾಗೂ ಅನಂತರ ಮಹಾರಾಜಕಾಲೇಜು ಶತಮಾನೋತ್ಸವ ಭವನದಲ್ಲಿ ಕೆಲಸ ಮಾಡುತ್ತಿದ್ದ ಈ ಸಂಸ್ಥೆ 1970ರಲ್ಲಿ ಮಾನಸಗಂಗೋತ್ರಿ ಆವರಣಕ್ಕೆ ವರ್ಗಾವಣೆಗೊಂಡಿತು. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅಂದಿನ ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು ಈ ಸಂಸ್ಥೆಗೆ ನೀಡಿದ್ದ 32 ಎಕರೆ ಜಮೀನಿಗೆ ಬದಲಾಗಿ ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಲ್ಲಿ 32 ಎಕರೆ ಜಮೀನು ನೀಡಿದ್ದರ ಫಲವಾಗಿ ಈ ಸಂಸ್ಥೆ ಇಲ್ಲಿ ರೂಪುಗೊಂಡಿತು. ವಾಕ್-ಶ್ರವಣ ದೋಷಗಳ ತಪಾಸಣೆ ಚಿಕಿತ್ಸೆಗಳ ಜೊತೆಗೆ ಈ ಸಂಸ್ಥೆ ಅಧ್ಯಯನ ಹಾಗೂ ಸಂಶೋಧನೆಗೆ ಸಹ ಹೆಚ್ಚಿನ ಒತ್ತು ನೀಡುತ್ತಿದೆ. ಈ ಸಂಸ್ಥೆ ನಿರ್ದೇಶಕಿಯಾಗಿ ವಾಕ್-‌ ಭಾಷ ತಜ್ಞೆ, ಮೈಸೂರಿನವರೇ ಆದ ಡಾ.ಪುಷ್ಪಾವತಿ ಅವರು ಕಾರ್ಯ ನಿರ್ವಹಿಸುತ್ತಿದ್ದು ಸಂಸ್ಥೆಯ ಚಟುವಟಿಕೆಗಳನ್ನು ಮುನ್ನಡೆಸುತ್ತಿದ್ದಾರೆ. : , 𝐃𝐢𝐫𝐞𝐜𝐭𝐨𝐫, 𝐃𝐫 𝐌 𝐏𝐮𝐬𝐡𝐩𝐚𝐯𝐚𝐭𝐡𝐢, 𝐭𝐡𝐞 𝐕𝐢𝐜𝐞 𝐏𝐫𝐞𝐬𝐢𝐝𝐞𝐧𝐭, 𝐈𝐧𝐝𝐢𝐚𝐧 𝐬𝐨𝐜𝐢𝐞𝐭𝐲 𝐨𝐟 𝐜𝐥𝐞𝐟𝐭 𝐥𝐢𝐩 𝐩𝐚𝐥𝐚𝐭𝐞 𝐚𝐧𝐝 𝐫𝐞𝐥𝐚𝐭𝐞𝐝 𝐜𝐫𝐚𝐧𝐢𝐨𝐟𝐚𝐜𝐢𝐚𝐥 𝐚𝐧𝐨𝐦𝐚𝐥𝐢𝐞𝐬, 𝐟𝐨𝐫 𝐭𝐡𝐞 𝐲𝐞𝐚𝐫 𝟐𝟎𝟐𝟒-𝟐𝟓. : . . , , , - “ ” 2024-25. , 22 , . . . , , , , - . 22 - “ ”.