ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಮನಸ್ಸು ಮಾಡ್ತಿಲ್ಲ: ಆನ್ ಲೈನ್ ತರಗತಿ ಮುಂದುವರೆಯುತ್ತೆ- ಮೈಸೂರು ವಿವಿ ಕುಲಪತಿ ಡಾ.ಜಿ. ಹೇಮಂತ್ ಕುಮಾರ್.. ಮೈಸೂರು,ನವೆಂಬರ್,30,2020(..):ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಮನಸ್ಸು ಮಾಡ್ತಿಲ್ಲ. ಹೀಗಾಗಿ ಆನ್ ಲೈನ್ ತರಗತಿಗಳು ಮುಂದುವರೆಯುತ್ತದೆ ಎಂದು ಮೈಸೂರು ವಿವಿ ಕುಲಪತಿ ಡಾ.ಜಿ. ಹೇಮಂತ್ ಕುಮಾರ್ ತಿಳಿಸಿದ್ದಾರೆ. ಮೈಸೂರಿನಲ್ಲಿ ಸೋಮವಾರ ಮಾತನಾಡಿದ ಮೈಸೂರು ವಿವಿ ಕುಲಪತಿ ಡಾ.ಜಿ. ಹೇಮಂತ್ ಕುಮಾರ್, ಶೇ.20ರಷ್ಟೇ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಉತ್ಸಾಹಿಗಳಾಗಿದ್ದಾರೆ. ಕಾಲೇಜುಗಳು ಪ್ರಾರಂಭವಾಗಿ 15 ದಿನಗಳಾದರೂ ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಮನಸ್ಸು ಮಾಡ್ತಿಲ್ಲ. ಈ ಹಿನ್ನೆಲೆ ಆನ್ ಲೈನ್ ತರಗತಿಗಳನ್ನ ಮುಂದುವರಿಸುತ್ತಿದ್ದೇವೆ ಎಂದರು. ಕಾಲೇಜುಗಳಿಗೆ ಬರುವ ಎಲ್ಲ ವಿದ್ಯಾರ್ಥಿಗಳಿಗೂ ಕೋವಿಡ್ ಟೆಸ್ಟ್ ಮಾಡಿಸಲಾಗುತ್ತಿದೆ. ಈ ಮಧ್ಯೆ ಇಲ್ಲಿಯವರೆಗೂ ಯಾವುದೇ ಗಂಭೀರ ಪ್ರಕರಣಗಳು ಕಂಡುಬಂದಿಲ್ಲ. ಮೈಸೂರು ವಿವಿ ವ್ಯಾಪ್ತಿಯಲ್ಲಿ ಕೋವಿಡ್ ಸಮಸ್ಯೆ ಇಲ್ಲ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ ಮಾಡಿರುವ ಪರಿಣಾಮ ಕೋವಿಡ್ ನ ಯಾವುದೇ ಗಂಭೀರ ಪ್ರಕರಣ ಕಂಡುಬಂದಿಲ್ಲ ಎಂದು ತಿಳಿಸಿದರು. ಗಾಯಕ ಎಸ್.ಪಿ.ಬಿ ಅಧ್ಯಯನ ಪೀಠ ಸ್ಥಾಪನೆ ಕುರಿತು ಹಂಸಲೇಖ ಅವರ ಜತೆ ಮಾತುಕತೆ… ಮೈಸೂರು ವಿವಿಯಲ್ಲಿ ಗಾಯಕ ಎಸ್.ಪಿ.ಬಿ ಅಧ್ಯಯನ ಪೀಠ ಸ್ಥಾಪನೆ ವಿಚಾರ ಕುರಿತು ಮಾತನಾಡಿದ ಪ್ರೊ. ಜಿ.ಹೇಮಂತ್ ಕುಮಾರ್, ಹಿನ್ನೆಲೆ ಗಾಯಕ ದಿ.ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಅಧ್ಯಯನ ಪೀಠ ಸ್ಥಾಪನೆ ಬಗ್ಗೆ ಈಗಾಗಲೇ ಸಂಗೀತ ನಿರ್ದೇಶಕ ಹಂಸಲೇಖ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. ಅಧ್ಯಯನ ಪೀಠಕ್ಕಾಗಿ 5 ಲಕ್ಷ ರೂ. ಹಣವನ್ನ ಯೋಜನೆ ರೂಪಿಸಲು ಇಟ್ಟಿದ್ದೇವೆ. ಒಂದು ವರ್ಷಗಳ ಎಸ್ ಪಿಬಿ ಕುರಿತ ಕಾರ್ಯಕ್ರಮ, ಸಂಶೋಧನಾ ಚಟುವಟಿಕೆ ನಡೆಸಲು ಉದ್ದೇಶಿಸಲಾಗಿದೆ. ಮಾನಸ ಗಂಗೋತ್ರಿ ಆವರಣದ ಲಲಿತಕಲಾ ಕಾಲೇಜಿನಲ್ಲಿ ಪೀಠ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು. …. , : . . , . 30, 2020 (..): . , , . . , -, . 15 . , . . . , .. . “ .5 . - . , . : / / : – - - –-.. .