ಕಾರಿನ ಕಿಟಕಿ ಗಾಜು ಹೊಡೆದು 10 ಲಕ್ಷ ರೂ. ಕಳ್ಳತನ… ಮೈಸೂರು,ನವೆಂಬರ್,28,2020(..):ದುಷ್ಕರ್ಮಿಗಳು ಕಾರಿನ ಕಿಟಕಿ ಗಾಜು ಹೊಡೆದು ಕಾರಿನಲ್ಲಿದ್ಧ 10 ಲಕ್ಷ ರೂ ಹಣವನ್ನ ಕಳುವು ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ವಿವಿ ಪುರಂನಲ್ಲಿ ಈ ಘಟನೆ ನಡೆದಿದೆ. ಪಿರಿಯಾಪಟ್ಟಣದ ಮನೋಜ್ ಕುಮಾರ್ ಅವರಿಗೆ ಸೇರಿದ ಹಣ ಎನ್ನಲಾಗಿದೆ. ಚಿನ್ನ ಬೆಳ್ಳಿ ವ್ಯಾಪಾರಿಯಾಗಿರುವ ಮನೋಜ್ ಕುಮಾರ್. ವ್ಯಾಪಾರಕ್ಕಾಗಿ ಹಣದ ಜೊತೆ ಮೈಸೂರಿಗೆ ಬಂದಿದ್ದರು. ಈ ನಡುವೆ ಮನೋಜ್ ಕುಮಾರ್ ಕಾರು ನಿಲ್ಲಿಸಿ ಬ್ಯಾಂಕ್‌ ನಲ್ಲಿ ಸ್ಟೇಟ್‌ ಮೆಂಟ್ ಪಡೆಯಲು ಹೋಗಿದ್ದರು. ಈ ವೇಳೆ ದುಷ್ಕರ್ಮಿಗಳು ಕಾರಿನ ಕಾರಿನ ಕಿಟಕಿ ಗಾಜು ಹೊಡೆದು ಕಾರಿನಲ್ಲಿದ್ಧ 10 ಲಕ್ಷ ರೂ ಹಣವನ್ನ ಎಗರಿಸಿದ್ದಾರೆ ಎನ್ನಲಾಗಿದೆ. ಇನ್ನು ಸ್ಥಳಕ್ಕೆ ವಿ ವಿ ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - - - – 10 - .