ರಾಜಮೌಳಿಗೆ ‘ಯುವ’ ಚಿತ್ರದ ಟೀಸರ್ ತೋರಿಸಿದ ಯುವರಾಜ್’ಕುಮಾರ್ ಬೆಂಗಳೂರು, ನವೆಂಬರ್ 28, 2020 (..):ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವರಾಜ್ ಕುಮಾರ್, ಖ್ಯಾತ ನಿರ್ದೇಶಕ ರಾಜಮೌಳಿಯನ್ನು ಭೇಟಿ ಮಾಡಿದ್ದಾರೆ. ಯುವ ಟೀಸರ್ ನೋಡಿದ ರಾಜಮೌಳಿ ಯುವರಾಜ್ ಕುಮಾರ್‌ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವ ರಣಧೀರ ಕಂಠೀರವ’ ಸಿನಿಮಾದಲ್ಲಿ ನಟಿಸಿರುವ ಯುವರಾಜ್ ಕುಮಾರ್, ಆ ಸಿನಿಮಾದ ಟೀಸರ್ ಅನ್ನು ರಾಜಮೌಳಿ ಅವರಿಗೆ ತೋರಿಸಿದ್ದಾರೆ. ಆರ್‌ಆರ್‌ಆರ್ ಸಿನಿಮಾದ ಸೆಟ್‌ನಲ್ಲಿ ರಾಜಮೌಳಿ ಅವರನ್ನು ಯುವರಾಜ್ ಕುಮಾರ್ ಭೇಟಿಯಾಗಿದ್ದಾರೆ. ಈ ಸಮಯ ಯುವ ರಣಧೀರ ಕಂಠೀರವ ಸಿನಿಮಾದ ನಿರ್ದೇಶಕ ಪುನೀತ್ ರುದ್ರನಾಗ್ ಸಹ ಇದ್ದಾರೆ.