ರಾಜ್ಯ ಸರ್ಕಾರದಿಂದ ‘ಕನ್ನಡ ಕಾಯಕ ವರ್ಷಾಚರಣೆಗೆ ಆದೇಶ… ಬೆಂಗಳೂರು, ನವೆಂಬರ್,28,2020(..): ರಾಜ್ಯದಲ್ಲಿ ಆಡಳಿತಭಾಷೆಯನ್ನಾಗಿ ಕನ್ನಡವನ್ನು ಅನುಷ್ಠಾನಕ್ಕೆ ತರಲು ಮುಂದಾದ ಸರಕಾರ ಮುಂದಿನ ಒಂದು ವರ್ಷಗಳ ತನಕ ” ಕನ್ನಡ ಕಾಯಕ ವರ್ಷ” ಘೋಷಿಸಿದೆ. ಕನ್ನಡ ಬಳಕೆ ಕುರಿತು ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕನ್ನಡ ಕಾಯಕ ವರ್ಷಾಚರಣೆಯನ್ನು ಇಡೀ ವರ್ಷ ಆಚರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊರೊನಾ ಆತಂಕದಲ್ಲಿರುವ ಕರ್ನಾಟಕದ ಎಲ್ಲಾ ವಲಯಗಳಲ್ಲಿ ಜೀವನೋತ್ಸಾಹ ತುಂಬುವ ಮೂಲಕ ಭವಿಷ್ಯದ ಕನ್ನಡವನ್ನು ಕಟ್ಟುವ ದೃಷ್ಟಿಯಿಂದ ಕನ್ನಡ, ಕಾಯಕ ವರ್ಷಾಚರಣೆಯನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಇಂದಿನಿಂದ ಒಂದು ವರ್ಷ ಕನ್ನಡ ಕಾಯಕ ವರ್ಷಾಚರಣೆಗೆ ಆದೇಶಿಸಲಾಗಿದೆ. ಡಿಸೆಂಬರ್ 5 ರಂದು ಕನ್ನಡ ಪರ ಸಂಘಟನೆಗಳಿಂದ ಬಂದ್ಗೆ ಕರೆ ಹಿನ್ನೆಲೆ. ಕನ್ನಡ-ಪರ ಪ್ರೇಮ ತೋರಿಸಲು ಮುಂದಾದ ರಾಜ್ಯ ಸರ್ಕಾರ‌. ಒಂದು ವರ್ಷ ಕನ್ನಡ ಕಾಯಕ ವರ್ಷಾಚರಣೆ ನಡೆಸಲು ಸುತ್ತೋಲೆ ಹೊರಡಿಸಿದೆ. ಇನ್ಮುಂದೆ ಸರ್ಕಾರಿ ಆದೇಶದ ಸುತ್ತೋಲೆ ಕನ್ನಡದಲ್ಲಿ ಹೊರಡಿಸುವುದು. ತಂತ್ರಜ್ಞಾನದಲ್ಲೂ ಕನ್ನಡ ಕಡ್ಡಾಯ ಬಳಕೆಗೆ ಸಹಾಯವಾಗುವಂತೆ ತಂತ್ರಾಂಶ ಅಭಿವೃದ್ಧಿ. ಇಲಾಖಾವಾರು ನೀತಿ, ಕರಡು ಪ್ರತಿಗಳು ಕನ್ನಡದಲ್ಲಿರಬೇಕು. ಫಲಾನುಭವಿಗಳಿಗೆ ಕಳಿಸುವ ಸಂದೇಶಗಳು ಕನ್ನಡದಲ್ಲಿರಬೇಕು. ನಗರ, ಪಟ್ಟಣಗಳ ಹೆಸರನ್ನು ಕನ್ನಡ ಭಾಷೆಯ ಉಚ್ಚಾರಣೆಯಂತೆಯೇ ಬಳಸುವುದು. ಕಾರ್ಯಕ್ರಮಗಳಲ್ಲಿ ಕನ್ನಡ ಕಲಾವಿದರಿಗೆ ಆದ್ಯತೆ ನೀಡುವುದು. ಕನ್ನಡ ಭಾಷೆ, ನೆಲ, ಜಲ ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮ ಮೊದಲಾದವುಗಳಲ್ಲಿ ಕೇವಲ ಕನ್ನಡ ಭಾಷೆ ಮಾತ್ರ ಬಳಕೆಗೆ ಸೂಚನೆ ನೀಡಲಾಗಿದೆ. ಎಲ್ಲಾ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಸಾರ್ವಜನಿಕರಿಗೆ ನೀಡುವ ದಾಖಲೆ ಮತ್ತು ಸೇವೆಯಲ್ಲಿ ಕನ್ನಡ ಕಡ್ಡಾಯಗೊಳಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. …. , . 28, 2020 (..): ‘ ’. , . - - . ’ , .: / / : – -