ಕಡಕ್ನಾತ್ ಎಂಬುದು ‘ಮೋದಿಕೋಳಿ’ ಎಂದೇ ಪ್ರಸಿದ್ಧಿ- ‘ಕಂಟ್ರಿ ಅಂಡ್ ಖಡಕ್’ ಉದ್ಘಾಟಿಸಿ ಸಚಿವ ಪ್ರಭು ಚೌಹಾಣ್ ಹೇಳಿಕೆ. ಬೆಂಗಳೂರು,ನವೆಂಬರ್,27,2020(..): ಕರ್ನಾಟಕದಲ್ಲಿಯೇ ಪ್ರಪ್ರಥಮವಾದ ಕಡಕ್ನಾತ್ ಕೋಳಿಯ ವಿಶೇಷ ಸ್ಟೋರ್ ʼಕಂಟ್ರಿ ಅಂಡ್ ಖಡಕ್ʼ ಅನ್ನು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ರವರು ಇಂದು ಬೆಳಿಗ್ಗೆ ಕೋರಮಂಗಲದ ನೂರಡಿರಸ್ತೆಯಲ್ಲಿ ಉದ್ಘಾಟಿಸಿದರು. ತದನಂತರ ಮಾತನಾಡಿದ ಸಚಿವ ಪ್ರಭುಚೌಹಾಣ್, “ಕಡಕನಾತ್ ಎಂಬುದುʼಮೋದಿಕೋಳಿʼ ಎಂದೇ ಪ್ರಸಿದ್ಧವಾಗಿದ್ದು ಮಹೇಂದ್ರಸಿಂಗ್ ಧೋನಿಯವರು ಸಹ ಸಾಕುತಿದ್ದಾರೆ. ಪ್ರಧಾನಿಯವರು ಈ ಕೋಳಿಯನ್ನು ಹೆಚ್ಚು ಉಪಯೋಗಿಸಲು ಸಾರ್ವಜನಿಕರಿಗೆ ಕರೆಕೊಟ್ಟಿದ್ದಾರೆ. ಕಡಕ್ನಾತ್ ಕಪ್ಪುಕೋಳಿಯು ಅತಿ ಉತ್ಕ್ರಷ್ಟ ಕೋಳಿಯಾಗಿರುತ್ತದೆ. ಇದು ಕೊಬ್ಬು ಹಾಗೂ ಕೊಲೆಸ್ಟ್ರಾಲ್ ರಹಿತವಾಗಿದ್ದು, ಅತಿಹೆಚ್ಚಿನ ಪ್ರೋಟೀನ್ ಹೊಂದಿರುತ್ತದೆ. ಆದ್ದರಿಂದ, ಸಾರ್ವಜನಿಕರು, ಈ ವಿಶೇಷ ಸ್ಟೋರ್ ಅನ್ನ ಉಪಯೋಗ ಪಡೆದುಕೊಂಡು, ಇದನ್ನು ಸಾಕುತ್ತಿರುವ ರೈತರಿಗೂ ಸಹಕರಿಸಬೇಕಾಗಿ ಕೋರುತ್ತೇನೆ” ಎಂದರು. : - - – –-