ವೈಯಕ್ತಿಕ ಕಾರಣಕ್ಕೆ ನೇಹಾ ಕೊಲೆ ಎಂದ ಸಿಎಂ ಸಿದ್ದರಾಮಯ್ಯ ವಿರುದ್ದ ಬೊಮ್ಮಾಯಿ ಕಿಡಿ. ಹಾವೇರಿ,ಏಪ್ರಿಲ್,20,2024 (..):ಹುಬ್ಬಳಿಯಲ್ಲಿನ ವಿದ್ಯಾರ್ಥಿನಿ ನೇಹಾ ಕೊಲೆ ವೈಯಕ್ತಿಕ ಕಾರಣಕ್ಕೆ ನಡೆದಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಈ ಕುರಿತು ಮಾತನಾಡಿದ ಬಸವರಾಜ ಬೊಮ್ಮಾಯಿ, ಇಂಥತಹ ಘಟನೆಯನ್ನೂ ಸಿಎಂ ಸಿದ್ದರಾಮಯ್ಯ ಹಗುರವಾಗಿ ತೆಗೆದುಕೊಂಡಿದ್ದಾರೆ. ಹೇಳಿಕೆ ನೀಡಿದ್ರೆ ಜವಾಬ್ದಾರಿ ಮುಗಿಯಿತಾ..? ಎಂದು ಹರಿಹಾಯ್ದರು. ಜನ ಭಯಭೀತರಾಗಿದ್ದಾರೆ ರಾತ್ರಿ ಮಲಗುತ್ತಿಲ್ಲ. ಸಬೂಬು ನೀಡದೇ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿ ಎಂದು ಬೊಮ್ಮಾಯಿ ಆಗ್ರಹಿಸಿದರು. : - -- – –