ನೂತನ ಕೃಷಿ ಮಸೂದೆ ವಿರೋಧಿಸಿ ದೆಹಲಿ ಚಲೋ: ಪ್ರತಿಭಟನಾನಿರತ ರೈತರ ಮೇಲೆ ಅಶ್ರುವಾಯು ಪ್ರಯೋಗ… ಚಂಡೀಗಢ,ನವೆಂಬರ್,26,2020(..):ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನ ವಿರೋಧಿಸಿ ಪಂಜಾಬ್ ಸೇರಿ ಹಲವು ರಾಜ್ಯಗಳ ರೈತರು ದೆಹಲಿ ಚಲೋ ನಡೆಸುತ್ತಿದ್ದು, ಈ ಅಂಗವಾಗಿ ಹರಿಯಾಣದ ಅಂಬಾಲದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಕೇಂದ್ರ ಸರ್ಕಾರದ ನೂತನ ಕೃಷಿ ನೀತಿ ವಿರೋಧಿಸಿ ದೆಹಲಿ ಚಲೋ ಭಾಗವಾಗಿ ಪಂಜಾಬ್ ನಿಂದ ಟ್ಯಾಕ್ಟರ್ ಇತರೇ ವಾಹನಗಳ ಮೂಲಕ ಹರಿಯಾಣದ ಗಡಿಯತ್ತ ರೈತರು ಆಗಮಿಸಿದ್ದರು. ಈ ವೇಳೆ ಪ್ರತಿಭಟನಾ ನಿರತ ರೈತರುಪೊಲೀಸರ ಭದ್ರತೆಯನ್ನು ಲೆಕ್ಕಿಸದೇ ಬ್ಯಾರಿಕೇಡ್‌ ಗಳನ್ನು ತಳ್ಳಿದ್ದಾರೆ. ಈ ವೇಳೆ ಹರಿಯಾಣ ಪೊಲೀಸರು ರೈತರ ಮೇಲೆ ಜಲಫಿರಂಗಿ ಪ್ರಯೋಗಿಸಿದ್ದಾರೆ. ಕೃಷಿ ನೀತಿ ವಿರೋಧಿಸಿ ರಾಜಸ್ತಾನ, ಕೇರಳಾ, ಪಂಜಾಬ್ ಉತ್ತರ ಪ್ರದೇಶದ ರೈತರು ನಡೆಸುತ್ತಿರುವ ಪ್ರತಿಭಟನೆ ಇದಾಗಿದೆ. ಈ ನಡುವೆ ಪಂಜಾಬ್-ಹರ್ಯಾಣ ಗಡಿಯ ಶಂಭು ಎಂಬಲ್ಲಿ ರೈತರು ಗುಂಪು ಸೇರಿ ದೆಹಲಿ ಚಲೋ ಆರಂಭಿಸಿ ಬ್ಯಾರಿಕೇಡ್ ತಳ್ಳಿ ಪ್ರತಿಭಟನೆಗೆ ಮುಂದಾದರು. ಹಾಗೆಯೇ ಬ್ಯಾರಿಕೇಡ್ ಗಳನ್ನ ನದಿಗೆ ಎಸೆಯಲು ಪ್ರತಿಭಟನಾಕಾರರು ಮುಂದಾಗಿದ್ದು ಈ ವೇಳೆ ಪರಿಸ್ಥಿತಿ ಉದ್ವಿಗ್ನವಾದ ಹಿನ್ನೆಲೆ ಪೊಲೀಸರು ಆಶ್ರುವಾಯು ಪ್ರಯೋಗಿಸಿದ್ಧಾರೆ ಎನ್ನಲಾಗಿದೆ. … : , . 26, 2020 (..): . ’ . - . , , . ’ .: --- -. : - –- ----